ಬ್ಲೂಬಾಯ್ಸ್ ಗೆ ಕವಿಗೋಷ್ಠಿಯಲ್ಲಿ ತಿವಿತ

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರವಣಬೆಳಗೊಳ: ಹಿಂದಿನ ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧದಲ್ಲಿ ನೀಲಿ ಚಿತ್ರ ನೋಡಿದ ಪ್ರಸಂಗವನ್ನೇ ವಸ್ತುವಾಗಿಸಿಕೊಂಡು ರಾಜಕಾರಣಿಗಳ ವರ್ತನೆಯನ್ನು ಲೇಖನಿ ಮೂಲಕ ತಿವಿಯಲಾಯಿತು.

ಸುಬ್ಬು ಹೊಲೆಯಾರ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚು ಕವಿಗಳ ಲೇಖನಿಗೆ ರಾಜಕಾರಣಿಗಳು, ಮಠಾಧೀಶರು, ದೇವಮಾನವರು, ಕಾಮುಕರು ವಸ್ತುವಾಗಿ, ಕವಿಗಳು ಪ್ರೇಕ್ಷೇಕರ ಚಪ್ಪಾಳೆ ಗಿಟ್ಟಿಸಿದರು. 3 ಗಂಟೆಗೂ ಹೆಚ್ಚು ಕಾಲ ನಡೆದ ಕವಿಗೋಷ್ಠಿಯಲ್ಲಿ ಹುಸೇನ್ ಭಾಷಾ ಅವರ `ಪ್ರಚಲಿತ ವಿಚಲಿತ' ಪದ್ಯವು
ಬಿಜೆಪಿ ಸರ್ಕಾರದಲ್ಲಿ ಸಚಿವರು ಸದನದಲ್ಲಿ ಮೊಬೈಲ್ ನಲ್ಲಿ ನೀಲಿಚಿತ್ರ ನೋಡಿದ ಪ್ರಸಂಗಕ್ಕೆ ಛಾಟಿ ಬೀಸಿತು. ಇದಲ್ಲದೆ ಎಂಜಲೆಲೆ ಮೇಲೆ ಉರುಳಾಡುವ ಮಡೆಸ್ನಾನ, ಅಡ್ಡಪಲ್ಲಕ್ಕಿಗೂ, ಸ್ವಯಂಘೋಷಿತ ದೇವಮಾನವರ ಬಗ್ಗೆಯೂ ಕವಿಗಳು ಕತ್ತಿ ಝಳಪಿಸಿದರು.

ಅರ್ಥವತ್ತಾಗಿ ಕವಿತೆ ಓದಿದ ಗುಬ್ಬಿಗೂಡು ರಮೇಶ್ ಅವರ `ನನ್ನ ಕವಿತೆ' ಜೋರು ಚಪ್ಪಾಳೆ ಗಿಟ್ಟಿಸಿತು. ಇನ್ನು ಗುರುದೇವಿ ಹುಲೆಪ್ಪನವರ ಮಠ ಅವರು ಬರೆದ `ಕವಿತೆಗೆ  ಹುಮಾನ' ಕೂಡ ನವಿರಾದ ಹಾಸ್ಯದ ಮೂಲಕ ಗಮನ ಸೆಳೆಯಿತು. ಇನ್ನು ರೆಹಮಾನ್ ಮುಲ್ಲಾ ಅವರು ಬಸವಣ್ಣನ ಕುರಿತು ಬರೆದ `ಪ್ರಿಯ ಅಣ್ಣನಿಗೆ' ಪದ್ಯದಲ್ಲಿ ಕಲ್ಯಾಣ ಕ್ರಾಂತಿಯ ಹರಿಕಾರ ಕೂಡಲ ಸಂಗಮನ ನಾಮಾಂಕಿತ ಬಸವಣ್ಣನ ಸಾಮಾಜಿಕ ಕ್ರಾಂತಿಯನ್ನು ನೆನಪಿಸಿಕೊಳ್ಳುತ್ತಾ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಮೌಲ್ಯಮಾಪನ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com