ನುಡಿಹಬ್ಬಕ್ಕೆ ಅದ್ಧೂರಿ ಚಾಲನೆ

ತ್ಯಾಗ ಅಹಿಂಸೆಯನ್ನು ಮನುಕುಲಕ್ಕೆ ಸಾರಿದ ಗೊಮ್ಮಟ ನಗರಿ ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
81ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: ತ್ಯಾಗ ಅಹಿಂಸೆಯನ್ನು ಮನುಕುಲಕ್ಕೆ ಸಾರಿದ ಗೊಮ್ಮಟ ನಗರಿ ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಜೈನಕಾಶಿ ಶ್ರವಣ ಬೆಳಗೊಳದ ವಿಂದ್ಯಗಿರಿಯಲ್ಲಿ ನಿರ್ಮಾಣ ಮಾಡಲಾಗಿರುವ ನಾಲ್ವಜಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನಗಳ ನುಡಿಜಾತ್ರೆಗೆ ಚಾಲನೆ ನೀಡಿದರು. ಮುಂದಿನ ಮೂರು ದಿನಗಳ ಹಿರಿಯ ಸಾಹಿತಿ ಸಿದ್ದಲಿಂಗಯ್ಯನವರ ಮುಂದಾಳತ್ವದಲ್ಲಿ ಸಾಹಿತ್ಯ, ಸಂಸ್ಕೃತಿ, ನಾಡು- ನುಡಿಯ ವಿಚಾರದಲ್ಲಿ ಮಥನ ನಡೆಯುವುದು. ಪುಸ್ತಕ ಮಾರಾಟ ಮಳಿಗೆಗಳು, ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ನಾಡಿನ ಮೂಲೆಮೂಲೆಯಿಂದ ಬರುವ ಸಾಹಿತ್ಯಾಭಿಮಾನಿಗಳಿಗೆ ವ್ಯವಸ್ಥೆಯಲ್ಲಿ ಕುಂದುಂಟಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ, ಜೈನ ಪೀಠ, ಸಂಘಸಂಸ್ಥೆಗಳು ಎಲ್ಲಿ ಹಂತದ ತಯಾರಿ ಮಾಡಿಕೊಂಡಿವೆ.

ಊರಿನಲ್ಲಿ ಸಡಗರ
ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಊರಿನ ಗುಂಡಿಬಿದ್ದ ರಸ್ತೆಗಳು ತರಾತುರಿಯಲ್ಲಿ ತೇಪೆಕಂಡಿವೆ. ಇದು ಒಂದು ಕಡೆಯಾದರೆ, ಸಾಹಿತ್ಯ ಹಬ್ಬವನ್ನು ಚೆಂದಗಾಣಿಸಲು ಇಡಿ ಊರಿಗೆ ಊರೇ ಟೊಂಕಕಟ್ಟಿ ನಿಂತಿದೆ. ಊರಿನೆಲ್ಲೆಡೆ ಸಮ್ಮೇಳನಕ್ಕೆ ಶುಭಕೋರುವ ಬಿsತ್ತಿಪತ್ರಗಳು, ತೋರಣ, ಬ್ಯಾನರ್ ಗಳು ರಾರಾಜಿಸುತ್ತಿವೆ. ಸರಾಸರಿ 31-32 ಡಿಗ್ರಿ ತಾಪಮಾನವಿದ್ದರೂ ಅದಕ್ಕೆ ಮೀರಿದ ಕನ್ನಡದ ಕಾವು ಊರಿನಲ್ಲಿದೆ.

ಕನಿಷ್ಠ ಅವಧಿ ಗರಿಷ್ಠ ತಯಾರಿ
ಇತಿಹಾಸವನ್ನು ಗಮನಿಸುವುದಾದರೆ ಸಾಹಿತ್ಯ ಸಮ್ಮೇಳನದ ತಯಾರಿ ಸಾಮಾನ್ಯವಾಗಿ 2-3 ತಿಂಗಳ ಮುಂಚಿತವಾಗಿಯೇ ಆರಂಭವಾಗುತ್ತದೆ. ಆದರೆ, ಶ್ರವಣಬೆಳಗೊಳ ಸಮ್ಮೇಳನದ ಪೂರ್ವತಯಾರಿಗೆ ಸಿಕ್ಕಿದ್ದು 25 ದಿನ ಮಾತ್ರ. ಹಾವೇರಿ-ರಾಣಿಬೆನ್ನೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಬೇಕೆ ಎಂಬ ಗೊಂದಲದಿಂದಾಗಿ ಅಂತಿಮವಾಗಿ ಸಮ್ಮೇಳನದ ಆತಿಥ್ಯದ ಪಟ್ಟ ಪಡೆದ ಶ್ರವಣಬೆಳಗೊಳ ಅತಿ ಕನಿಷ್ಠ ಅವಧಿಯಲ್ಲಿ ಗರಿಷ್ಠ ತಯಾರಿ ಮಾಡಿಕೊಂಡಿರುವುದು ಮಾತ್ರ ಅಚ್ಚರಿ. ಪ್ರಮುಖವಾಗಿ ಚಾರುಕೀರ್ತಿ ಭಟ್ಟಾರಕರು ಖುದ್ದು ಆಸ್ಥೆ ವಹಿಸಿ ಸಜ್ಜುಗೊಳಿಸಿದ್ದರೆ ಎಂಬುದನ್ನು ಊರಿನವರೇ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com