ಊರುಕೇರಿ ಸುತ್ತಿದ ಸಿದ್ದಲಿಂಗಯ್ಯ

ಶುಕ್ರವಾರ ಸಂಜೆಯೇ ಶ್ರವಣಬೆಳಗೊಳಕ್ಕೆ ತಮ್ಮ ಪತ್ನಿ ರಮಾಕುಮಾರಿ ಅವರೊಡನೆ ಬಂದ ಸಿದ್ದಲಿಂಗಯ್ಯ...
ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ(ಸಂಗ್ರಹ ಚಿತ್ರ)
ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ(ಸಂಗ್ರಹ ಚಿತ್ರ)
Updated on

ಶುಕ್ರವಾರ ಸಂಜೆಯೇ ಶ್ರವಣಬೆಳಗೊಳಕ್ಕೆ ತಮ್ಮ ಪತ್ನಿ ರಮಾಕುಮಾರಿ ಅವರೊಡನೆ ಬಂದ ಸಿದ್ದಲಿಂಗಯ್ಯನವರು, ಶನಿವಾರ ಮುಂಜಾನೆದ್ದು ಪಟ್ಟಣವನ್ನು ಸುತ್ತಾಡಿದರಲ್ಲದೇ ಅಲ್ಲಿರುವ ಬೆಟ್ಟಗುಡ್ಡಗಳನ್ನು ವೀಕ್ಷಿಸಿದರು.

ಅಲ್ಲದೇ ವೇದಿಕೆ, ಪುಸ್ತಕ ಮಳಿಗೆಗಳು, ಉಟೋಪಚಾರ ವ್ಯವಸ್ಥೆ, ವಸತಿ, ಅಡುಗೆ ಕೋಣೆ ಮತ್ತಿತರ ಕಡೆ ದಂಪತಿ ಸಮೇತ ಹೋಗಿ ಪರಿಶೀಲಿಸಿದರು. ಈ ಊರಿನ ಮನೆಗಳ ಅಂಗಳಗಳು ರಂಗೋಲಿಯಿಂದ ಬೆಳಗುತ್ತಿವೆ. ಬೀದಿಕೇರಿಗಳು ಕನ್ನಡ ಧ್ವಜಗಳಿಂದ ಕಂಗೊಳಿಸುತ್ತಿವೆ. ಇದನ್ನು ನೋಡಿದರೆ ನನ್ನೂರಿನ ಗ್ರಾಮ ದೇವತೆಯ ಹಬ್ಬ ನೆನಪಿಗೆ ಬರುತ್ತದೆ ಎಂದು ಮೆಲುಕು ಹಾಕಿದರು.

ಕೇವಲ 25 ರಿಂದ 29 ದಿನಗಳ ಅವಧಿಯಲ್ಲಿ ಶ್ರೀ ಚಾರುಕೀರ್ತೀ ಭಟ್ಟಾಕರ ನೇತೃತ್ವದಲ್ಲಿ ಶಾಸಕ ಬಾಲಕೃಷ್ಣ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ  ಪದಾಧಿಕಾರಿಗಳ ಶ್ರಮದಿಂದ ಸಕಲ ಸಿದ್ಧತೆ ಮಾಡಲಾಗಿದೆ. ಇಷ್ಟೊಂದು ದೊಡ್ಡ ವೇದಿಕೆಯನ್ನು ಸುಂದರವಾಗಿ ನಿರ್ಮಿಸಲಾಗಿದೆ. ಒಟ್ಟಾರೆ ಸಿದ್ಧತೆ ನನಗೆ ಖುಷಿ ತಂದಿದೆ ಎಂದು ಕೃತಜ್ಞತೆ ಸಲ್ಲಿಸಿದರು.

1 ರಿಂದ 10 ನೇ ತರಗತಿಯವರೆಗಿನ ಶಿಕ್ಷಣ ಕನ್ನಡ ಮಾಧ್ಯಮವಾಗಬೇಕು ಎಂಬ ಏಕಮಾತ್ರ ನಿರ್ಣಯವನ್ನು ಈ ಸಮ್ಮೇಳನ ಕೈಗೊಳ್ಳಬೇಕು. ಅದು ಅನುಷ್ಠಾನಗೊಳ್ಳಲು
ಜನಾಂದೋಲನವಾಗಬೇಕು. ಅದಕ್ಕಾಗಿ ಸಾಹಿತಿಗಳು, ಕಲಾವಿದರು ಸೇರಿದಂತೆ ಎಲ್ಲ ಸ್ತರದ ಜನರು ಆಂದೋಲನಕ್ಕೆ ಕೈ ಜೋಡಿಸಬೇಕು.
-ಡಾ.ಸಿದ್ದಲಿಂಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com