ಸಿದ್ದಲಿಂಗಯ್ಯ ದೇವರ ನಂಬಲ್ಲ: ಎಚ್ ಡಿ ದೇವಗೌಡ
ಶ್ರವಣಬೆಳಗೊಳ: ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯನವರು ದೇವರನ್ನು ನಂಬುವುದಿಲ್ಲ. ನಾನು ನಂಬಿ ಪ್ರಾರ್ಥನೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವಗೌಡ ಅವರು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು, ಸಿದ್ದಲಿಂಗಯ್ಯನವರ ಹುಟ್ಟು ಹಬ್ಬ ಇಂದು. ನಾಡಿನ ಸೇವೆ ಸಲ್ಲಿಸಲು ಇನ್ನೂ ಆಯಸ್ಸು, ಆರೋಗ್ಯ ಕೊಡಲಿ ಎಂದು ಹುಟ್ಟುಹಬ್ಬದ ಶುಭಾಶಯ ಕೋರಿದರು. ಅಲ್ಲದೇ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಯಾರಿಗೆ ಭದ್ರತೆ ನೀಡುತ್ತಾರೆ?
ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ನಡುವೆ ಜೀವ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯನ್ನು ಉದಾಹರಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು,ತಮಗೆ ಮತ್ತು ತಮ್ಮ ಕುಟುಂಬಕ್ಕೆ ನೀಡಿರುವ ಭದ್ರತೆಯನ್ನು ಹಿಂತೆಗೆಯುವ ಬಗ್ಗೆ ರಾಜ್ಯ ಸರ್ಕಾರದ ನಡೆ ಬಗ್ಗೆ ಕುಟುಕಿದರು. ಮಹಾತ್ಮ
ಗಾಂಧಿ ಆಗಷ್ಟೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಗಾಂಧೀಜಿ ಅವರ ಬಳಿ ತೆರಳಿ. ನಿಮಗೆ ಪ್ರಾಣ ಬೆದರಿಕೆ ಇದೆ. ಹೀಗಾಗಿ ರಕ್ಷಣೆಯ ಅವಶ್ಯಕತೆ ಎಂದರು.
ಆಗ ಗಾಂಧೀಜಿಯವರು, ನೋಡಯ್ಯ ನಾನು ಮಾಡಬೇಕಾದ ಕೆಲಸ ಮುಗಿದಿದೆ. ಯಾರೂ ಯಾರನ್ನೂ ರಕ್ಷಿಸಲು ಸಾಧ್ಯವಿಲ್ಲ. ಜಗದ ಕಾರ್ಯ ಮುಗಿದ ಕೂಡಲೇ ಎಲ್ಲರೂ ಹೋಗಲೇಬೇಕು. ನಾನೂ ಹೋಗುತ್ತೇನೆ. ನನ್ನ ಜೀವ ರಕ್ಷಣೆ ಬಗ್ಗೆ ನಿನಗೆ ಚಿಂತೆ ಬೇಡ ಎಂದಿದ್ದರು. ಅಯ್ಯೋ ಶಿವನೇ ಯಾರಿಗೆ ಯಾರು ರಕ್ಷಣೆ ನೀಡುವರೋ ಎಂದು ಗೌಡರು ಹಣೆ ಚಚ್ಚಿಕೊಂಡಿದ್ದು ಮಾರ್ಮಿಕವಾಗಿತ್ತು.
ಒಂದೆಡೆ ಭಾಷಣ; ಮತ್ತೊಂದೆಡೆ ಸನ್ಮಾನ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಗಳವಾರ ಬೆಳಗ್ಗೆ ನಡೆದ ಸನ್ಮಾನಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿ ಕೆಲವರನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಅವರು ಚನ್ನಗಿರಿಗೆ ಹೋಗಬೇಕಾದ ಕಾರಣ ಬೇಗ ಹೋಗಬೇಕು ಎಂದು ಭಾಷಣ ಮುಗಿಸಿ ಹೊರಟರು. ಯಡಿಯೂರಪ್ಪನವರು ಭಾಷಣ ಮಾಡುತ್ತಿರಬೇಕಾದರೆ,
ಸಮ್ಮೇಳನಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರು ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಒಟ್ಟು 93 ಮಂದಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಮುಗಿದ ನಂತರ ಬಂದ ಗೌಡರು ಕೂಡ ಬೆಂಗಳೂರಿಗೆ ತುರ್ತು ಕೆಲಸ ಇರಬೇಕಾದ ಕಾರಣ ಹೋಗುವುದಾಗಿ ಹೇಳಿ ಭಾಷಣ ಮಾಡಿ ಹೊರಟರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ