ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಗುತ್ತಿದ್ದು..
81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)
81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಗುತ್ತಿದ್ದು, ಈಗಗಾಲೇ ಎಲ್ಲ ರೀತಿಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ.

ಎತ್ತಿನಗಾಡಿಯಲ್ಲಿ ಮೆರವಣಿಗೆ
ಜ. 31 ರಂದು ಸಂಜೆ 4 ಕ್ಕೆ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಎತ್ತಿ ನಗಾಡಿಯಲ್ಲಿ ಮೆರವಣಿಗೆ ಮಾಡುತ್ತಿರುವುದು ಸಮ್ಮೇಳನದ ವಿಶೇಷ. ಫೆ.1 ರಂದು ಬೆಳಗ್ಗೆ 10.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು. ಹಿಂದಿನ ಸಮ್ಮೇಳನಾಧ್ಯಕ್ಷ ಡಾ. ನಾ. ಡಿಸೋಜ, ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಸೇರಿದಂತೆ ನಾಡಿನ ಆನೇಕಾನೇಕ ಸಾಹಿತಿಗಳು, ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ.

147 ಎಕರೆಯಲ್ಲಿ ವೇದಿಕೆ ವ್ಯವಸ್ಥೆ
ವಿಂಧ್ಯಗಿರಿಯ ಹಿಂಭಾಗ ಸಮ್ಮೇಳನಕ್ಕಾಗಿಯೇ 147 ಎಕರೆ ಪ್ರದೇಶವನ್ನು 18 ಲಕ್ಷ ರು. ವೆಚ್ಚದಲ್ಲಿ ಸಮತಟ್ಟು ಮಾಡಿ, ಅಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಮತ್ತು ಸಭಾಂಗಣವನ್ನು 2 ಕೋಟಿ ರು. ವೆಚ್ಚದಲ್ಲಿ ಭವ್ಯವಾಗಿ ನಿರ್ಮಿಸಲಾಗಿದೆ.

ಪ್ರಕಾಶ್ ರೈ ಚಾಲನೆ
ಫೆಬ್ರವರಿ 1 ರಾತ್ರಿ ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ ನೀಡಲು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ 90 ಕಲಾ ತಂಡಗಳ  ಸುಗಮ ಸಂಗೀತ, ಕನ್ನಡ ಗೀತೆಗಳು, ಜನಪದ ಗೀತೆಗಳು ಇನ್ನಿತರ ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ.

ಊಟದ ವ್ಯವಸ್ಥೆ
ಸಭಾಂಣದಲ್ಲಿ 25 ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಜೊತೆಗೆ 500 ಅಡಿ ವಿಸ್ತೀರ್ಣದ ಸಮಾನಾಂತರ ವೇದಿಕೆ ನಿರ್ಮಾಣವಾಗಿವೆ. ಊಟದ ವ್ಯವಸ್ಥೆ ಸುಗಮ ವಾಗಿರಬೇಕೆಂಬ ಉದ್ದೇಶದಿಂದ 5 ಭೋಜನದ ಸಭಾಂಗಣಗಳನ್ನು ನಿರ್ಮಾಣ ಮಾಡಿದ್ದು, ಒಂದೊಂದು ಸಭಾಂಗಣವೂ 100 ಅಡಿ ಮತ್ತು 200 ಅಡಿ ವಿಸ್ತೀರ್ಣ ಹೊಂದಿದೆ. ಒಂದೊಂದು ಸಭಾಂಗಣದಲ್ಲಿ 5 ಸಾವಿರ ಜನರು ಊಟ ಮಾಡುವ ವ್ಯವಸ್ಥೆ ಇದೆ.

5 ನೇ ಬಾರಿ ಸಮ್ಮೇಳನ
ಶ್ರವಣಬೆಳಗೊಳದಲ್ಲಿ ಆರಂಭವಾಗಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ಹಾಸನ ಜಿಲ್ಲೆ 5 ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಹಾಸನ ನಗರ ಹಾಗೂ ಶ್ರವಣಬೆಳಗೊಳದಲ್ಲಿ ತಲಾ 2 ಮತ್ತು ಬೇಲೂರಿನಲ್ಲಿ 1 ಬಾರಿ ಸಮ್ಮೇಳನ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com