
ನವದೆಹಲಿ: ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ರೇಲ್ವೆ ಇಲಾಖೆ ಮಹಿಳೆಯರ ಸುರಕ್ಷತೆಗಾಗಿ ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಿದೆ.
ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಯಾವುದೇ ರೀತಿಯ ಸುರಕ್ಷೆ ಇಲ್ಲದೇ, ಅವರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ರೇಲ್ವೆ ಇಲಾಖೆಯ ತಂತ್ರಜ್ಞಾನ ವಿಭಾಗ ಕ್ರಿಸ್(ಸಿಆರ್‌ಐಎಸ್) ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿಗೊಳಿಸಿದೆ.
ಕ್ರಿಸ್ ಅಭಿವೃದ್ಧಿಗೊಳಿಸಿರುವ ಸುರಕ್ಷಾ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, ಅಪಾಯ ಸ್ಥಿತಿಯಲ್ಲಿರಬೇಕಾದರೆ ಮಹಿಳೆಯರು ಒಂದು ಬಾರಿ ಬಟನ್ ಕ್ಲಿಕ್ ಮಾಡುವ ಮೂಲಕ ಆರ್‌ಪಿಎಫ್ ಅಥವಾ ಜಿಆರ್‌ಪಿಗೆ ಸಂದೇಶ ರವಾನಿಸಬಹುದು. ಸಂದೇಶ ಬಂದ ಕೂಡಲೇ ರೈಲ್ವೆ ಇಲಾಖೆ ಮಹಿಳಾ ಸುರಕ್ಷೆಗೆ ಮುಂದಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಬಾಬು ತಿಳಿಸಿದ್ದಾರೆ.
Advertisement