
ವಾಷಿಂಗ್ಟನ್: ಮಂಗಳನ ಅಂಗಳಕ್ಕೆ ಕಳುಹಿಸಿದ ಕ್ಯೂರಿಯಾಸಿಟಿ ರೋವರ್, ಮಂಗಳನಲ್ಲಿ ನೀರು ಇರುವ ಬಗ್ಗೆ ಹೊಸ ಸಾಕ್ಷ್ಯವನ್ನು ಪತ್ತೆ ಮಾಡಿದೆ. ಮಂಗಳ ಗ್ರಹವೂ ಭೂಮಿಯಂತೆಯೇ ಸೌರವ್ಯೂಹ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿ ಬದುಕು ಸಾಧ್ಯವಿದೆಯಂತೆ.
ಕ್ಯೂರಿಯಾಸಿಟಿ ಕಳುಹಿಸಿರುವ ಫೋಟೋ ನೋಡಿದರೆ, ಅದರಲ್ಲಿ ಒಂದು ಕಾಲದಲ್ಲಿ ಮಂಗಳನ ಮೇಲ್ಮೈನಲ್ಲಿ ನದಿ ಹರಿದು ಹೋಗಿತ್ತು ಎಂಬ ವಿಷಯ ಸ್ಪಷ್ಟವಾಗುತ್ತದೆ.
ಮಂಗಳನಲ್ಲಿ ಹವಾಮಾನ ಬದಲಾವಣೆಯೂ ನಡೆದಿದ್ದು, ಹಲವಾರು ಕಣಿವೆಗಳು ಇಲ್ಲಿದ್ದವು ಎಂಬುದಕ್ಕೆ ಕುರುಹು ಸಿಕ್ಕಿದೆ. ಅಲ್ಲಿರುವ ಕಲ್ಲು ಮಣ್ಣುಗಳ ಗಾತ್ರ ಹಾಗೂ ಮೇಲ್ಮೈಯ ದಪ್ಪ ನೋಡಿದರೆ ಅಲ್ಲಿ ನೀರು ಇತ್ತು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳು ಸಿಗುತ್ತವೆ ಎಂದು ನಾಸಾ ಹೇಳಿದೆ.
ಮಂಗಳನಲ್ಲಿ 5 ಕಿ.ಮೀ ಎತ್ತರದ ಮೌಂಟ್ ಶಾರ್ಪ್ ಪತ್ತೆಯಾಗಿದ್ದು, ಈ ಪರ್ವತವು ಅಲ್ಲಿ ಕಣಿವೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.
ಆದಾಗ್ಯೂ, ಮೌಂಟ್ ಶಾರ್ಪ್‌ನ ರಹಸ್ಯವನ್ನು ಭೇದಿಸುವ ಕಾರ್ಯಗಳನ್ನು ನಾವೀಗ ಮಾಡುತ್ತಿದ್ದೇವೆ ಎಂದು ಕ್ಯೂರಿಯಾಸಿಟಿ ಪ್ರಾಜೆಕ್ಟ್ ವಿಜ್ಞಾನಿ ಜಾನ್ ಗ್ರೋಟಿಂಜರ್ ಹೇಳಿದ್ದಾರೆ.
Advertisement