8 ವರ್ಷಗಳ ನಿದ್ರೆಯಿಂದ ಎಚ್ಚೆತ್ತ ಹಾರಿಝಾನ್

ಪ್ಲೂಟೋ ಗ್ರಹದ ಬಗ್ಗೆ ಅಧ್ಯಯನ ನಡೆಸಲೆಂದು 8 ವರ್ಷಗಳ ಹಿಂದೆ ನಾಸಾ ಹಾರಿಬಿಟ್ಟಿದ್ದ ಬಾಹ್ಯಾಕಾಶ ನೌಕೆಯು ಸುಪ್ತಸ್ಥಿತಿಯಿಂದ ಎಚ್ಚೆತ್ತಿದೆ.
ಕಲಾವಿದನ ಕಲ್ಪನೆಯಲ್ಲಿ ಪ್ಲೂಟೋ ಗ್ರಹದತ್ತ ಮುನ್ನುಗ್ಗುತ್ತಿರುವ ಹಾರಿಝಾನ್ ಉಪಗ್ರಹ (ಸಂಗ್ರಹ ಚಿತ್ರ)
ಕಲಾವಿದನ ಕಲ್ಪನೆಯಲ್ಲಿ ಪ್ಲೂಟೋ ಗ್ರಹದತ್ತ ಮುನ್ನುಗ್ಗುತ್ತಿರುವ ಹಾರಿಝಾನ್ ಉಪಗ್ರಹ (ಸಂಗ್ರಹ ಚಿತ್ರ)

ಲಂಡನ್: ಪ್ಲೂಟೋ ಗ್ರಹದ ಬಗ್ಗೆ ಅಧ್ಯಯನ ನಡೆಸಲೆಂದು 8 ವರ್ಷಗಳ ಹಿಂದೆ ನಾಸಾ ಹಾರಿಬಿಟ್ಟಿದ್ದ ಬಾಹ್ಯಾಕಾಶ ನೌಕೆಯು ಸುಪ್ತಸ್ಥಿತಿಯಿಂದ ಎಚ್ಚೆತ್ತಿದೆ.

ಸೋಮವಾರ ಸಂಜೆ ನ್ಯೂ ಹಾರಿಝಾನ್ ಬಾಹ್ಯಾಕಾಶ ನೌಕೆಯು ತನ್ನೆಲ್ಲಾ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಸಂದೇಶವನ್ನು ಭೂಮಿಯಲ್ಲಿರುವ ನಿಯಂತ್ರಣಾ ಕೊಠಡಿಗೆ ಕಳುಹಿಸಿಕೊಟ್ಟಿದೆ.

ಇನ್ನು 7 ತಿಂಗಳಿನಲ್ಲಿ ನೌಕೆಯು ಪ್ಲೂಟೋದ ಸಮೀಪಕ್ಕೆ ತಲುಪಲಿದೆ. ಬಳಿಕ ಇದು ಪ್ಲೂಟೋದ ಬಗ್ಗೆ ಅಧ್ಯಯನ ಕೈಗೊಂಡು, ಗ್ರಹದ ಮೇಲ್ಮೈನ ವಿವರವಾದ ಚಿತ್ರಗಳನ್ನು ಸೆರೆ ಹಿಡಿದು ವಿಜ್ಞಾನಿಗಳಿಗೆ ಕಳುಹಿಸಿಕೊಡಸಿದೆ. ಜನವರಿಯಲ್ಲಿ ಇದು ಪ್ಲೊಟೋದಿಂದ 160 ದಶಲಕ್ಷ ಮೈಲು ದೂರದಲ್ಲಿದ್ದು, ಗ್ರಹದ ಅಧ್ಯಯನ ಆರಂಭಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com