ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಸದ್ಯದಲ್ಲೆ

ಟ್ರಾಫಿಕ್ ಪೊಲೀಸರು ಡ್ರೈವಿಂಗ್ ಲೈಸೆನ್ಸ್...
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಸದ್ಯದಲ್ಲೆ

ವಾಷಿಂಗ್ಟನ್: ಟ್ರಾಫಿಕ್ ಪೊಲೀಸರು ಡ್ರೈವಿಂಗ್ ಲೈಸೆನ್ಸ್ ಕೇಳಿದರೆ, ಪರ್ಸ್‌ನಲ್ಲಿ ಅಥವಾ ಗಾಡಿಯಲ್ಲಿ ಲೈಸೆನ್ಸ್ ತಡಕಾಡುವ ಕಷ್ಟ ಸದ್ಯದಲ್ಲೇ ಬಗೆಹರಿಯಲಿದೆ.

ಪ್ಲಾಸ್ಟಿಕ್ ಡ್ರೈವಿಂಗ್ ಲೈಸೆನ್ಸ್ ತೋರಿಸುವ ಬದಲು ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ತೋರಿಸಬಹುದಾಗಿದೆ.

ಹೌದು, ಶೀಘ್ರದಲ್ಲೇ ಬರಲಿದೆ ಡಿಜಿಟಲ್ ಲೈಸೆನ್ಸ್. ಅಮೆರಿಕದ ಐಓಡಬ್ಯೂಎ ಸಾರಿಗೆ ಇಲಾಖೆ ಡಿಜಿಟಲ್ ಲೈಸೆನ್ಸ್ ಅಭಿವೃದ್ಧಿಗೆ ಚಿಂತನೆ ನಡೆಸಿದೆ.

ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸುತ್ತಿದ್ದು, ಅದರ ಮೂಲಕ ಚಾಲಕ ತನ್ನ ಡ್ರೈವಿಂಗ್ ಲೈಸೆನ್ಸ್‌ನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸುವಂತಹ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ.

ಈ ಆ್ಯಪ್‌ನ್ನು ಕೆಲವು ಚಾಲಕರ ಸ್ಟಾರ್ಟ್‌ಫೋನ್‌ಗಳಲ್ಲಿ ಅಳವಡಿಸಿ ಪರೀಶೀಲಿಸಿದ ನಂತರ, ಸಾರ್ವಜನಿಕರಿಗಾಗಿ ಡಿಜಿಟಲ್ ಲೈಸೆನ್ಸ್ ಆ್ಯಪ್‌ನ್ನು ಬಿಡುಗಡೆ ಮಾಡಲಾಗುವುದು ಎಂದು ಇಲಾಖ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com