ಗೂಗಲ್ ನಿಂದ ಹಿಂದಿ ಜಾಹೀರಾತು ಸೇವೆ

ಅಂತರ್ಜಾಲ ಸೇವೆಗಳ ದೈತ್ಯ ಗೂಗಲ್, ವಿಶ್ವದಾದ್ಯಂತ ಇರುವ
ಗೂಗಲ್
ಗೂಗಲ್

ನವದೆಹಲಿ: ಅಂತರ್ಜಾಲ ಸೇವೆಗಳ ದೈತ್ಯ ಗೂಗಲ್, ವಿಶ್ವದಾದ್ಯಂತ ಇರುವ ೫೦೦ ದಶಲಕ್ಷ ಹಿಂದಿ ಭಾಷಿಕರನ್ನು ತಲುಪಲು ತನ್ನ ಜಾಹೀರಾತು ಫಲಕಗಳಲ್ಲಿ ಹಿಂದಿ ಜಾಹೀರಾತುಗಳ ಸೇವೆಯನ್ನು ಅನಾವರಣ ಮಾಡಿದೆ.

ಪ್ರಾಂತೀಯ ಭಾಷೆಗಳ ಅಭಿವೃದ್ಧಿಗೆ ಹಾಗೂ ವಿಶ್ವದ ವಿವಿಧ ಭಾಷೆಗಳನ್ನು ತನ್ನ ಸಹಾಯ ಹಸ್ತ ಚಾಚುವುದಕ್ಕೆ ಈ ನಡೆ ಸಹಕಾರಿಯಾಗಲಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

"ಇಂದಿನಿಂದ ಜಾಹೀರಾತುದಾರರು ಭಾರತದ ಜನತೆಗೆ, ಅತಿ ಹೆಚ್ಚು ಮಾತನಾಡುವ ಭಾಷೆಯಾದ ಹಿಂದಿಯಲ್ಲಿ ಜಾಹೀರಾತುಗಳನ್ನು ನೀಡಬಹುದಾಗಿದೆ" ಎಂದು ತಿಳಿಸಿದೆ.

ನವೆಂಬರ್ ನಲ್ಲಿ ಇಂಡಿಯನ್ ಲಾಂಗ್ವೇಜ್ ಇಂಟರ್ ನೆಟ್ ಅಲಾಯೆನ್ಸ್ (ಐ ಎಲ್ ಐ ಎ), ಭಾರತೀಯ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗಾಗಿ ತಂಡವನ್ನು ಗೂಗಲ್ ಸಂಸ್ಥೆ ಘೋಷಿಸಿತ್ತು. ಐ ಎಲ್ ಐ ಎ ತನ್ನ ಪ್ರಯತ್ನಗಳಿಂದ ೩೦೦ ದಶಲಕ್ಷ ಪ್ರಾದೇಶಿಕ ಭಾಷಿಕರನ್ನು ೨೦೧೭ ರೊಳಗೆ ಅಂತರ್ಜಾಲಕ್ಕೆ ಪಾದಾರ್ಪಣೆ ಮಾಡಲು ಸಾಧ್ಯವಾಗುವತ್ತ ಡುಡಿಯಲಿದೆ ಎಂದು ಈ ಅಂತರ್ಜಾಲ ಸಂಸ್ಥೆ ತಿಳಿಸಿತ್ತು.

ಗೂಗಲ್ ಈಗಾಗಲೇ www.hindiweb.com ಮೂಲಕ ಇತರ ಅಂತರ್ಜಾಲ ತಾಣಗಳಲ್ಲಿ, ಆಪ್ ಗಳಲ್ಲಿ, ಬ್ಲಾಗ್ ಗಳಲ್ಲಿ ಇರುವ ಹಿಂದಿ ವಿಷಯದ ವಸ್ತುಗಳನ್ನು ಅಂತರಜಾಲ ಬಳಕೆದಾರರಿಗೆ ತಿಳಿಸುವ ಸೇವಯನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com