೬% ಜಾಗತಿಕ ಜನಸಂಖ್ಯೆಗೆ ಅಂತರ್ಜಾಲ ಚಟ

ಜಾಗತಿಕ ಜನಸಂಖ್ಯೆಯಲ್ಲಿ ಶೇಕಡಾ ೬% ಜನ ಅಂತರ್ಜಾಲದ ಚಟದಿಂದ
ಸಾಮಾಜಿಕ ಅಂತರ್ಜಾಲ ತಾಣಗಳು
ಸಾಮಾಜಿಕ ಅಂತರ್ಜಾಲ ತಾಣಗಳು

ಜಾಗತಿಕ ಜನಸಂಖ್ಯೆಯಲ್ಲಿ ಶೇಕಡಾ ೬% ಜನ ಅಂತರ್ಜಾಲದ ಚಟದಿಂದ ನರಳುತ್ತಿದ್ದಾರೆ ಎನ್ನುತ್ತದೆ ಹೊಸ ಅಧ್ಯಯನ.

ಇದು ವಿಶ್ವದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿದ್ದು, ಉತ್ತರ ಮತ್ತು ಪಶ್ಚಿಮ ಯೂರೋಪಿನಲ್ಲಿ ೨.೬% ಜನಸಂಖ್ಯೆ ಅಂತರ್ಜಾಲ ಚಟಕ್ಕೆ ಬಿದ್ದಿದ್ದು, ಮಧ್ಯ ಪ್ರಾಚ್ಯ ದೇಶಗಳಲ್ಲಿ ಈ ಚಟ ೧೦.೯% ಇದೆ.

ಈ ಇಂಟರ್ ನೆಟ್ ಚಟಕ್ಕೂ ಹಾಗು ಅವರ ಜೀವನದ ಗುಣಮಟ್ಟಕ್ಕೂ ಸಂಬಂಧವಿದೆ ಎನ್ನುತ್ತಾರೆ ಈ ಅಧ್ಯಯನ ನಡೆಸಿದ ಸಂಶೋಧನಕಾರರು.

ಈ ಪ್ರಬಂಧದ ಮುಖ್ಯ ಸಂಪಾದಕ ಬ್ರೆಂಡಾ ಕೆ ವೈಡರ್ ಹೋಲ್ಡ್ , ಇಂಟರಾಕ್ಟಿವ್ ಮೀಡಿಯಾ ಇನ್ಷ್ಟಿಟ್ಯೂಟ್,  ವರ್ಚುಯಲ್ ರಿಯಾಲಿಟಿ ಮೆಡಿಕಲ್ ಇನ್ಸ್ಟಿಟ್ಯೂಟ್ ಜಂಟಿಯಾಗಿ ನಡೆಸಿರುವ ಈ ಸಂಶೋಧನೆಯಲ್ಲಿ ಅಂತರ್ಜಾಲ ಚಟಕ್ಕೂ ಜೀವನದ ಗುಣಮಟ್ಟಕ್ಕೂ ವೈರುಧ್ಯದ ಸಂಬಂಧ ಇದೆ, ಆದರೆ ಇದನ್ನು ಸಾಬೀತು ಪಡಿಸಲು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com