ಶುಕ್ರ ಗ್ರಹದ ಮೇಲೆ ತೇಲುವ ನಗರ ನಿರ್ಮಾಣ ನಾಸಾ ಬಯಕೆ?

ಮಂಗಳನ ಅಂಗಳದಲ್ಲಿ ಮನುಷ್ಯರ ವಾಸ...
ಶುಕ್ರ ಗ್ರಹ
ಶುಕ್ರ ಗ್ರಹ

ನ್ಯೂಯಾರ್ಕ್: ಮಂಗಳನ ಅಂಗಳದಲ್ಲಿ ಮನುಷ್ಯರ ವಾಸಸ್ತಾನ ನಿರ್ಮಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಶುಕ್ರ ಗ್ರಹ ಮಾನವ ವಾಸಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಅಲ್ಲಿ ವಸತಿ ನಿರ್ಮಾಣ ಮಾಡಬಹುದೆಂಬುದನ್ನು ಅನೇಕ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ.

ಅದರಂತೆ ಶುಕ್ರನ ಮೇಲೆ ಮನುಷ್ಯನ ವಾಸಕ್ಕೆ ಪೂರಕ ವಾತಾವರಣ ಇಲ್ಲದಿದ್ದರು. ಶುಕ್ರನ ಗ್ರಹದಿಂದ 30 ಕಿ.ಮೀ ಎತ್ತರದಲ್ಲಿ ತೇಲುವ ನಗರ ನಿರ್ಮಿಸಲು ನಾಸಾ ಗಮನ ಹರಿಸಿದೆ ಎನ್ನಲಾಗಿದೆ.

ಶುಕ್ರ ಗ್ರಹದಿಂದ 30 ಕಿ.ಮೀ ಎತ್ತರದಲ್ಲಿ ಬಹುತೇಕ ಭೂಮಿಯಲ್ಲಿರುವಂತೆ ವಾತಾವರಣವಿದೆ. ಗುರುತ್ವಾಕರ್ಷಣ ಶಕ್ತಿ ಮತ್ತು ವಾಯುಭಾರ ಬಹುತೇಕ ಭೂಮಿಯಂತೇ ಇದೆ. ಆದರೆ ಉಷ್ಣಾಂಶ ಮಾತ್ರ ವಿಪರೀವಿದ್ದು, ಗರಿಷ್ಠ 75 ಡಿಗ್ರೀ ಸೆಲ್ಷಿಯಸ್‌ವರೆಗೂ ಉಷ್ಣಾಂಶವಿದೆ ಎಂದು ಹೇಳಲಾಗಿದೆ.

ರೋಬೋವೊಂದನ್ನು ಶುಕ್ರನ ಅಂಗಳಕ್ಕೆ ಕಳುಹಿಸಿ ಈಗಾಗಲೇ ಪ್ರಾಥಮಿಕ ಪರಿಶೀಲನೆ ನಡೆಸಲಾಗುತ್ತಿದೆ. ಬದುಕಲು ಸೂಕ್ತ ವಾತಾವರಣದ ಸುಳಿವು ಸಿಕ್ಕ ಬಳಿಕ ಶುಕ್ರ ಗ್ರಹರಿಂದ 30 ಕಿ.ಮೀ ಎತ್ತರದಲ್ಲಿ ಮನುಷ್ಯರಿರುವ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗುತ್ತದೆ.

ಗಗನ ಯಾತ್ರಿಗಳು ಒಂದು ತಿಂಗಳು ಕಾಲಕಳೆದು ಭೂಮಿಗೆ ಮರಳುತ್ತಾರೆ. ಇದಾದ ಬಳಿಕ ತಲಾ ಇಬ್ಬರು ಗಗನಯಾತ್ರಿಗಳಿರುವ ಎರಡು ತಂಡಗಳನ್ನು ಕಳುಹಿಸಿ ಒಂದು ವರ್ಷ ಬಿಡಲಾಗುತ್ತದೆ. ಎಲ್ಲವೂ ಸುಗಮವಾಗಿ ನಡೆದರೆ, ಶುಕ್ರ ಗ್ರಹದ ಮೇಲೆ ಖಾಯಂ ಆಗಿ ಮಾನವನ ಕಾಲೋನಿಗಳನ್ನು ನಿರ್ಮಿಸುವುದು ನಾಸಾದ ಬೃಹತ್ ಯೋಜನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com