
ಬೆಂಗಳೂರು: ನವೆಂಬರ್ ೨೫ ರಿಂದ ೨೮ರವರೆಗೆ ಬಂಗಳೂರಿನಲ್ಲಿ ಕಾಮನ್ ವೆಲ್ತ್ ವಿಜ್ಞಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಭಾರತ ಸರ್ಕಾರದ ರಾಯಲ್ ಸೊಸೈಟಿ ಆಯೋಜಿಸುತ್ತಿರುವ ಈ ಸಮಾವೇಶ ೫೦ ವರ್ಷಗಳಿಂದ ನಡೆದ ಮೊದಲ ಕಾಮನ್ ವೆಲ್ತ್ ವಿಜ್ಞಾನ ಸಮಾವೇಶವಾಗಿದೆ.
ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿನ ಯುವ ಸಂಶೋಧಕರಿಗೆ ಒಟ್ಟಿಗೆ ಸೇರುವ ಅವಕಾಶ ಕೊಡಲು ಹಾಗೂ ಯುವ ವಿಜ್ಞಾನಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಮಾವೇಶದ ವ್ಯಾಪ್ತಿ ವಿಶಾಲವಾಗಿದ್ದು, ಗಣಿತ, ತಂತ್ರಜ್ಞಾನ, ಎಂಜಿನಿಯರಿಂಗ್, ಭೌತ ವಿಜ್ಞಾನ, ಜೀವ ವಿಜ್ಞಾನ ಹಾಗೂ ವಿಜ್ಞಾನ ನೀತಿಯನ್ನೂ ಒಳಗೊಂಡಿದೆ.
ಈ ಸಮಾವೇಶದಲ್ಲಿ ೩೦೦ ಜನ ವಿಶೇಷ ಆಹ್ವಾನಿತರು, ಕಾಮನ್ ವೆಲ್ತ್ ರಾಷ್ಟ್ರಗಳಿಂದ ೭೦ ಪಿ ಎಚ್ ಡಿ ವಿದ್ಯಾರ್ಥಿಗಳು, ಹಾಗು ಬೆಂಗಳೂರಿನ ಪ್ರಾದೇಶಿಕ ಪ್ರತಿನಿಧಿಗಳು ಭಾಗವಗಿಸಲಿದ್ದಾರೆ.
ರಾಯಲ್ ಸೊಸೈಟಿಯ ಅಧ್ಯಕ್ಷ ಪಾಲ್ ನರ್ಸ್ ಹಾಗು ಪ್ರಧಾನ ಮಂತ್ರಿಯವರ ವಿಜ್ಞಾನ ಸಲಹಾ ಸಮಿತಿಯ ಅಧ್ಯಕ್ಷ ಭಾರತ ರತ್ನ ಸಿ ಎನ್ ಆರ್ ರಾವ್ ಅವರ ವಿಶೇಷ ಉಪನ್ಯಾಸವಿರುತ್ತದೆ.
ಈ ಸಮಾವೇಶವನ್ನು ಜವಾಹರ್ ನೆಹರೂ ಉನ್ನತ ವಿಜ್ಞಾನ ಸಂಸೋಧನಾ ಕೆಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
Advertisement