
ವಾಷಿಂಗ್ಟನ್: ಇಸ್ರೋ ಕಳುಹಿಸಿದ ಮ್ಯಾಮ್ ನೌಕೆ ಮಂಗಳಗ್ರಹ ತಲುಪಲು 11 ತಿಂಗಳುಗಳೇ ಬೇಕಾದವು. ಆದರೆ ಮನುಷ್ಯರನ್ನು ಕೇವಲ 39 ದಿನಗಳಲ್ಲಿ
ಕೆಂಪು ಗ್ರಹ ತಲುಪಿಸುವುದಾಗಿ ಟೆಕ್ಸಾಸ್ ಮೂಲಕ ಕಂಪನಿಯೊಂದು ಹೇಳಿದೆ. ಇದು ಸುಳ್ಳಲ್ಲ. 39 ದಿನಗಳಲ್ಲಿ ಮಾನವ ರನ್ನು ಮಂಗಳಕ್ಕೆ ತಲುಪಿಸುವ ಕ್ರಾಂತಿಕಾರಿ
ಎಂಜಿನ್‍ವೊಂದನ್ನು ಆ್ಯಡ್ ಅಸ್ತ್ರ ರಾಕೆಟ್ ಕಂಪನಿ ಅಭಿವೃದ್ಧಿ ಪಡಿಸುತ್ತಿದೆ. ಇದರ ಅಭಿವೃದ್ಧಿ ಗಾಗಿ ಸ್ವತಃ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬರೋಬ್ಬರಿ ರು. 60 ಕೋಟಿ ಆರ್ಥಿಕ ನೆರವು ಕೂಡ ನೀಡಿದೆ.ಹಿಂದೆಂದೂ ಕಂಡರಿಯದಂತಹ ರಾಕೆಟ್ ಇದಾಗಿದೆ. ಇದು ಪ್ಲಾಸ್ಮಾ ರಾಕೆಟ್. ಇದನ್ನು ಉಡಾವಣೆಗಾಗಿ ಬಳಸಲಾಗುವುದಿಲ್ಲ. ಪ್ಲಾಸ್ಮಾವನ್ನು ರೇಡಿಯೋ ತರಂಗಾಂತರದ ಮೂಲಕ ಅತ್ಯಧಿಕ ತಾಪಮಾನದಲ್ಲಿ ಕುದಿಸಿದಾಗ ಈ ಎಂಜಿನ್ ಕಾರ್ಯನಿರ್ವ ಹಿಸಲು ಆರಂಬಿsಸುತ್ತದೆ. ಆಗ ಬಲಿಷ್ಟವಾದ ಕಾಂತಕ್ಷೇತ್ರವು ಎಂಜಿನ್‍ನ ಹಿಂಭಾಗದಿಂದ ಪ್ಲಾಸ್ಮಾವು ಹೊರಹೋಗುವಂತೆ ಮಾಡುತ್ತದೆ. ಆಗ ಒತ್ತಡ ಹೆಚ್ಚಿ ಎಂಜಿನ್ ಅತ್ಯಧಿಕ ವೇಗದಲ್ಲಿ ಮುನ್ನುಗ್ಗಲು ಆರಂಭಿಸುತ್ತದೆ ಎಂದು ಕಂಪನಿಯ ಸಿಇಒ,
ಮಾಜಿ ಗಗನಯಾತ್ರಿ ಫ್ರಾಂ ಕ್ಲಿನ್ ಚಾಂಗ್ -ದಿಯಾಝಿ ತಿಳಿಸಿದ್ದಾರೆ.
Advertisement