ಮೊಬೈಲ್ ಬ್ಯಾಟರಿ ಚಾರ್ಜ್ ಆಗಲು ಒಂದು ನಿಮಿಷ ಸಾಕು!

ಒಂದ್ನಿಮಿಷ...ಈ ಮೊಬೈಲ್ ಚಾರ್ಜ್ ಮಾಡಿಬಿಡ್ತೀನಿ ಎಂದು ಹೇಳಿದರೆ, ಅದು ಸುಮ್ಮನೆ ಬಾಯಿ ಮಾತಿಗೆ ಹೇಳಿದ್ದಲ್ಲ....
ಮೊಬೈಲ್
ಮೊಬೈಲ್

ಕ್ಯಾಲಿಫೋರ್ನಿಯಾ: ಒಂದ್ನಿಮಿಷ...ಈ ಮೊಬೈಲ್ ಚಾರ್ಜ್ ಮಾಡಿಬಿಡ್ತೀನಿ ಎಂದು ಹೇಳಿದರೆ, ಅದು ಸುಮ್ಮನೆ ಬಾಯಿ ಮಾತಿಗೆ ಹೇಳಿದ್ದಲ್ಲ. ಯಾಕೆಂದರೆ ಒಂದು ನಿಮಿಷದಲ್ಲಿ ಚಾರ್ಚ್ ಮಾಡಲು ಸಾಧ್ಯವಾಗುವ ಮೊಬೈಲ್ ಇನ್ಮುಂದೆ ಬರಲಿದೆ. ಒಂದು ಮೊಬೈಲ್‌ನ ಬ್ಯಾಟರಿ ಚಾರ್ಜ್ ಆಗಲು ಕೇವಲ 60 ಸೆಕೆಂಡು ಮಾತ್ರ ಬೇಕಾಗುವ ಮೊಬೈಲ್ ಫೋನ್ ಬ್ಯಾಟರಿಯೊಂದನ್ನು ಕ್ಯಾಲಿಫೋರ್ನಿಯಾ ಸ್ಟಾನ್‌ಫೋರ್ಡ್ ವಿವಿ ಕಂಡು ಹಿಡಿದಿದೆ.

ಕಡಿಮೆ ಖರ್ಚಿನಲ್ಲಿ ತಯಾರಿಸಲಾಗುವ ಅಲ್ಯುಮಿನಿಯಂ ಬ್ಯಾಟರಿಯಿಂದಾಗಿ ಒಂದು ನಿಮಿಷದಲ್ಲಿ ಮೊಬೈಲ್ ಚಾರ್ಜ್ ಆಗುತ್ತದೆ.

ಈಗಿರುವ ಲಿಥಿಯಂ, ಅಲ್‌ಕೈನಲ್ ಬ್ಯಾಟರಿಗಳಿಗೆ ಹೋಲಿಸಿದರೆ ಅಲ್ಯುಮಿನಿಯಂ ಬ್ಯಾಟರಿ ಸುರಕ್ಷಿತವಾಗಿದೆ ಎಂದು ಸ್ಟಾನ್‌ಫೋರ್ಡ್ ವಿವಿ ಕೆಮಿಸ್ಟ್ರಿ ಪ್ರೊಫೆಸರ್ ಹೋಜೆಂಗ್ ಡೇ ಹೇಳಿದ್ದಾರೆ. ಈ ಬ್ಯಾಟರಿ ಯಾವುದೇ ಕಾರಣಕ್ಕೂ ಸ್ಫೋಟವಾಗಲ್ಲ. ಮೊಬೈಲ್ ಪೂರ್ತಿ ಚಾರ್ಜ್ ಆಗಬೇಕಾದರೆ ಗಂಟೆಗಳಷ್ಟು ಕಾಲ ಬೇಕಾಗಿಯೂ ಇರುವುದಿಲ್ಲ. ನೆಗೆಟಿವ್ ಚಾರ್ಜ್ ಇರುವ ಅಲ್ಯುಮಿನಿಯಂ ಬಳಸಿ ನಿರ್ಮಿಸಿದ ಆನೋಡ್ , ಪಾಸಿಟಿವ್ ಚಾರ್ಜ್ ಇರುವ ಗ್ರಾಫೈಟ್ ಬಳಸಿ ನಿರ್ಮಿಸಿದ ಕಾಥೋಡ್ ಈ ಬ್ಯಾಟರಿಯಲ್ಲಿದೆ ಎಂದು ವಿವಿ ಸಂಶೋಧನಾ ತಂಡ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com