ಚೀನಾದಲ್ಲಿ ನೆಲ ಅಗೆಯುವಾಗ ಪತ್ತೆಯಾದ 43 ಡೈನೋಸಾರ್ ಮೊಟ್ಟೆಗಳು

ಮನೆ ಕಟ್ಟಲು ಪಾಯ ಅಗೆಯುತ್ತಿದ್ದಾಗ ನೆಲದೊಳಗೆ ನಿರ್ಮಿಸಿದ ಗೂಡಿನಲ್ಲಿ 43 ಡೈನಾಸೋರ್ ಮೊಟ್ಟೆಗಳು ಪತ್ತೆಯಾಗಿವೆ...
ಡೈನೋಸಾರ್ ಮೊಟ್ಟೆಗಳು
ಡೈನೋಸಾರ್ ಮೊಟ್ಟೆಗಳು

ಬೀಜಿಂಗ: ಮನೆ ಕಟ್ಟಲು ಪಾಯ ಅಗೆಯುತ್ತಿದ್ದಾಗ ನೆಲದೊಳಗೆ ನಿರ್ಮಿಸಿದ ಗೂಡಿನಲ್ಲಿ 43 ಡೈನಾಸೋರ್ ಮೊಟ್ಟೆಗಳು ಪತ್ತೆಯಾಗಿವೆ.

ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತದಲ್ಲಿನ ಹಿಯುವಾನ್ ಎಂಬ ನಗರದಲ್ಲಿ ಮನೆ ಕಟ್ಟಲು ಪಾಯ ಅಗೆಯುತ್ತಿದ್ದಾಗ ನೆಲದೊಳಗೆ 43 ಡೈನಾಸೋರ್ ಮೊಟ್ಟೆಗಳು ಪತ್ತೆಯಾಗಿವೆ.

ನೆಲದೊಳಗೆ ಸಿಕ್ಕ ಮೊಟ್ಟೆಗಳು ಡೈನಾಸೋರ್ ಮೊಟ್ಟೆಗಳು ಎಂದು ಖಚಿತ ಪಡಿಸಲಾಗಿದೆ.
ಆದರೆ ಡೈನೋಸಾರ್ ಬಗೆಗಿನ ಮಾಹಿತಿ ಇನ್ನೂ ನಿಗೂಢವಾಗಿಯೇ ಇದೆ ಎಂದು ಡೈನೋಸಾರ್ ಮ್ಯೂಸಿಯಂನ ಕ್ಯುರೇಟರ್ ಡುಯಾನ್ಲಿ ಹೇಳಿದ್ದಾರೆ.

ಈ ಮೊಟ್ಟೆಗಳ ವ್ಯಾಸ 13 ಸೆಂಟಿಮೀಟರ್ ಇದೆ. ಎಲ್ಲಾ ಮೊಟ್ಟೆಗಳನ್ನು ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಮ್ಯೂಸಿಯಂ ವಶಕ್ಕೇ ನೀಡಲಾಗಿದೆ. 1996ರಿಂದ ಈವರೆಗೆ ಚೀನಾದ ಹಿಯುವಾನ್ ನಗರದಲ್ಲಿ 17 ಸಾವಿರ ಇಂತಹ ಮೊಟ್ಟೆಗಳು ಪತ್ತೆಯಾಗಿವೆ. ಅಲ್ಲದೇ ಡೈನೋಸಾರ್ ಪ್ರಾಣಿಯ ಪಳಯುಳಿಕೆಗಳೂ ಸಿಕ್ಕಿವೆ. ಈ ಮೊಟ್ಟೆಗಳು ಮಿಲಿಯನ್‌ಗಟ್ಟಲೆ ವರ್ಷದಷ್ಟು ಹಳೆಯವು ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com