
ನವದೆಹಲಿ: ನೇಪಾಳದಲ್ಲಿನ ಮಹಾಭೂಕಂಪದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಗಳು ಭರದಿಂದ ಸಾಗಿವೆ. ಅಲ್ಲಿರುವ ನಮ್ಮ ಬಂಧುಗಳು, ಸ್ನೇಹಿತರು ಸುರಕ್ಷಿತರಾಗಿದ್ದಾರಾ? ಅವರನ್ನು ಹುಡುಕುವ ಸಲುವಾಗಿ ಗೂಗಲ್ ಪರ್ಸನ್ ಫೈಂಡರ್ ಎಂಬ ಫೀಚರ್‌ನ್ನು ಆರಂಭಿಸಿದರೆ ಫೇಸ್‌ಬುಕ್ ಸೇಫ್ಟೀ ಚೆಕ್ ಎಂಬ ಫೀಚರ್ ನ್ನು ನೀಡಿದೆ.
ಸೇಫ್ಟೀ ಚೆಕ್ ಫೀಚರ್‌ನಲ್ಲಿ ಫೇಸ್‌ಬುಕ್ ತಮ್ಮ ಬಳಕೆದಾರರು ನೇಪಾಳದಲ್ಲಿ ಸುರಕ್ಷಿತರಾಗಿದ್ದಾರೆಯೇ? ಇಲ್ಲವೇ ಎಂಬುದನ್ನು ಅಪ್‌ಡೇಟ್ ಮಾಡಲು ಹೇಳುತ್ತದೆ. ಬಳಕೆದಾರರು ಸೇಫ್ ಆಗಿದ್ದರೆ ಸೇಫ್ಟಿ ಚೆಕ್ ಬಳಸಿದಾಗ ಅದು ಅವರ ಎಲ್ಲ ಸ್ನೇಹಿತರಿಗ ನಿಮ್ಮ ಸ್ನೇಹಿತ ಸುರಕ್ಷಿತವಾಗಿದ್ದಾರೆ ಎಂಬ ಸಂದೇಶವನ್ನು ಕಳುಹಿಸುತ್ತದೆ.
ನಿಮ್ಮ ಸ್ನೇಹಿತರು ಸೇಫ್ ಆಗಿದ್ದರೆ, ಅವರನ್ನು ಫ್ಲಾಗ್ ಮಾಡುವ ಅವಕಾಶವನ್ನೂ ಫೇಸ್‌ಬುಕ್‌ನಲ್ಲಿ ನೀಡಲಾಗುತ್ತಿದೆ. ಈ ಫೀಚರ್‌ಗಾಗಿ https://www.facebook.com/safetycheck/nepalearthquake ಲಿಂಕ್ ಕ್ಲಿಕ್ ಮಾಡಿ
Advertisement