ಫೇಸ್‌ಬುಕ್‌ನಲ್ಲಿ ಹೆಚ್ಚಿನವರು Ha ha ಎಂದೇ ಖುಷಿ ವ್ಯಕ್ತಪಡಿಸುತ್ತಾರಂತೆ!

ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ...
ಇಮೋಜಿಗಳು
ಇಮೋಜಿಗಳು

ನ್ಯೂಯಾರ್ಕ್: ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ. ಅದರಲ್ಲಿ  ಹೆಚ್ಚಿನ ಜನರು ತಮಗೆ ಖುಷಿಯಾದಾಗ "ha ha" ಎಂದು ಬರೆದು ಇಮೋಜಿ ಬಳಸುತ್ತಾರಂತೆ. ಇನ್ನು ಕೆಲವರು he he ಮತ್ತು "LOL (laughing out loud)" ಎಂದು ಬರೆದು ತಮ್ಮ ಖುಷಿಯನ್ನು ವ್ಯಕ್ತ ಪಡಿಸುತ್ತಾರಂತೆ.
ಬಹುತೇಕ ಜನರು  "haha  ಬಳಸುವವರು( 51.4 ಶೇ ), ಇಮೋಜಿ ಬಳಸುವವರು (33.7 ಶೇ). hehe  ಬಳಸುವವರು(12.7 ಶೇ) ಹಾಗೆಯೇ  lol ಬಳಸುವವರು 1.9 ಶೇ ಇದ್ದಾರೆ.

 ಇ-ನಗುವವರು ಎಷ್ಟು ಬಾರಿ ಇಂಥಾ ಪದಗಳನ್ನು ಬಳಸುತ್ತಾರೆ  ಎಂಬುದನ್ನೂ ಫೇಸ್ ಬುಕ್ ಅಧ್ಯಯನ ನಡೆಸಿದೆ

ಶೇ. 46ರಷ್ಟು ಮಂದಿ ಒಂದು ವಾರದಲ್ಲಿ ಒಂದೇ ಒಂದು ಸಾರಿ ಹೀಗೆ  ನಗ್ತಾರಂತೆ. ಅದೇ ವೇಳೆ ಶೇ 85ರಷ್ಟು ಮಂದಿ ವಾರದಲ್ಲಿ 5 ಬಾರಿ ಹೀಗೆ ನಗ್ತಾರೆ.

ಇದರಲ್ಲಿ ಶೇ. 52 ಮಂದಿ ಒಂದೇ ರೀತಿಯ ನಗು ಅನುಸರಿಸಿದರೆ,  ಶೇ. 20ರಷ್ಟು ಮಂದಿ ಎರಡು ವಿಧಗಳಲ್ಲಿ ನಗ್ತಾರಂತೆ.

ಅವರ ನಗುವಿಗೆ ತಕ್ಕಂತೆ ಅವರು ಅಲ್ಲಿ   haha, hehe,   ಇಮೋಜಿ ಮತ್ತು LOL ಬಳಸುತ್ತಾರಂತೆ.
ಇ ನಗುವಿನಲ್ಲಿ  ವಯಸ್ಸು, ಲಿಂಗದ ಹಾಗೂ ಭೌಗೋಳಿಕ ಪ್ರದೇಶದಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.


ಯುವ ಜನತೆ ಮತ್ತು ಮಹಿಳೆಯರು ಇಮೋಜಿ ಬಳಸಿದರೆ, ಗಂಡಸರು ಹೆಚ್ಚಾಗಿ he he ಎಂದು ಬಳಸುತ್ತಾರಂತೆ.

ಮಹಿಳೆಯರು ಮತ್ತು ಪುರುಷರು hehe ಇಷ್ಟಪಡುತ್ತಿದ್ದು, ಇನ್ನುಳಿದವರು hehe ಮತ್ತು LOL ಜತೆ ಇಮೋಜಿಯನ್ನೂ ಇಷ್ಟಪಡುತ್ತಾರಂತೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com