ತಾಪ ಹೆಚ್ಚಿದ್ರೆ ಕ್ರಿಮಿನಾಶಕ ದುರ್ಬಲ

ಮುಂದಿನ ದಿನಗಳಲ್ಲಿ ಡೆಂಘೀ, ಚಿಕೂನ್‍ಗುನ್ಯಾ, ಹಳದಿ ಜ್ವರ ಮತ್ತಿತರ ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳ ನಾಶಕ್ಕೆ ಬಳಸುವಂಥ ಕೀಟನಾಶಕಗಳು ತಮ್ಮ ಪರಿಣಾಮಕಾರಿತ್ವವನ್ನೇ ಕಳೆದುಕೊಳ್ಳಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ...
ಚಿಕನ್ ಗೂನ್ಯ ಮತ್ತು ಡೆಂಘೀ ಹರಡುವ ಸೊಳ್ಳೆಗಳು (ಸಂಗ್ರಹ ಚಿತ್ರ)
ಚಿಕನ್ ಗೂನ್ಯ ಮತ್ತು ಡೆಂಘೀ ಹರಡುವ ಸೊಳ್ಳೆಗಳು (ಸಂಗ್ರಹ ಚಿತ್ರ)

ಪ್ಯಾರಿಸ್: ಹವಾಮಾನ ವೈಪರೀತ್ಯವು ಮಾನವ ಕುಲಕ್ಕೆ ಹೇಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂಬ ಸತ್ಯಗಳು ಒಂದೊಂದಾಗಿ ಬಯಲಾಗುತ್ತಿವೆ. ಮುಂದಿನ ದಿನಗಳಲ್ಲಿ ಡೆಂಘೀ, ಚಿಕೂನ್‍ಗುನ್ಯಾ, ಹಳದಿ ಜ್ವರ ಮತ್ತಿತರ ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳ ನಾಶಕ್ಕೆ ಬಳಸುವಂಥ ಕೀಟನಾಶಕಗಳು ತಮ್ಮ ಪರಿಣಾಮಕಾರಿತ್ವವನ್ನೇ ಕಳೆದುಕೊಳ್ಳಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಪ್ಯಾರಿಸ್‍ನಲ್ಲಿ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಮಹತ್ವದ ಶೃಂಗ ನಡೆಯುತ್ತಿರುವ ಸಂದರ್ಭದಲ್ಲೇ ಈ ವರದಿಯೂ ಬಹಿರಂಗವಾಗಿದೆ. ಅಪಾಯಕಾರಿ ಸೊಳ್ಳೆಗಳು ಹಲವು ರೋಗಗಳಿಗೆ ಕಾರಣವಾಗುವ ವೈರಸ್ ಗಳನ್ನು ಹರಡುತ್ತವೆ. ಈ ಕೀಟಗಳು ನೆಲೆಸಿರುವ ಬಹುತೇಕ ಪ್ರದೇಶಗಳಲ್ಲಿ ತೀವ್ರ ತರದ ಹವಾಮಾನ ಬದಲಾವಣೆ ಆಗುತ್ತಿದೆ. ಉಷ್ಣತೆ ಹೆಚ್ಚಾದಂತೆ ಈ  ಸೊಳ್ಳೆಗಳ ಮೇಲೆ ಪ್ರಯೋಗಿಸಲಾಗುವ ಕೀಟನಾಶಕಗಳ ಪ್ರಭಾವ ದುರ್ಬಲವಾಗುತ್ತಾ ಹೋಗುತ್ತದೆ.

ಕಡಿಮೆ ತಾಪಮಾನವು ಸೊಳ್ಳೆಗಳನ್ನು ಹೆಚ್ಚು ಸಂವದೇನಕಾರಿಯಾಗಿಸಿದರೆ, ಅಧಿಕ ತಾಪಮಾನದಲ್ಲಿ ಇವು ಸಕ್ರಿಯಗೊಳ್ಳುತ್ತವೆ ಎಂದೂ ಅಧ್ಯಯನ ವರದಿ ತಿಳಿಸಿದೆ. ಈ ವರದಿಯನ್ನು  ಮೆಡಿಕಲ್ ಎಂಟಮಾಲಜಿಯ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ವಿಶ್ವಸಂಸ್ಥೆಯ ಹವಾಮಾನ ಶೃಂಗವು ಯಶಸ್ವಿಯಾಗಬೇಕೆಂದು ಬಯಸುತ್ತಿರುವ ಅಮೆರಿಕವು ಭಾರತ ಮತ್ತು ಚೀನಾವನ್ನು  ಸೆಳೆಯಲು ಪ್ರಯತ್ನಿಸಿದೆ. ಭಾರತ, ಚೀನಾದಂತಹ ದೇಶಗಳ ಹವಾಮಾನ ಮತ್ತು ಅಭಿವೃದ್ಧಿಯ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತಹ ಮಹತ್ವದ ಒಪ್ಪಂದವನ್ನು ವಿಶ್ವವು  ಮಾಡಿಕೊಳ್ಳ ಬೇಕಿದೆ ಎಂದು ಅಮೆರಿಕ ಹೇಳಿದೆ.

ಒಪ್ಪಂದಕ್ಕಾಗಿ ಮಾತುಕತೆ: ಇದೇ ವೇಳೆ, ಭೂಗ್ರಹದ ತಾಪ ಹೆಚ್ಚಿಸುತ್ತಿರುವ ಹಸಿರು ಮನೆ ಅನಿಲವನ್ನು ಕಡಿಮೆಗೊಳಿಸುವ ಐತಿಹಾಸಿಕ ಒಪ್ಪಂದಕ್ಕೆ ಸಂಬಂಧಿಸಿ 150 ದೇಶಗಳು ಮಾತುಕತೆ ಆರಂಭಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com