ಫೇಸ್‌ಬುಕ್‌ಗೆ ಲಾಗಿನ್ ಆದ ಕೂಡಲೇ Act now to save Free Basics in India ಎಂಬ ನೋಟಿಫಿಕೇಶನ್ ಬಂದು, ಅದಕ್ಕೆ ಸಹಿ ಹಾಕುವಂತೆ ಹೇಳುತ್ತದೆ. ಹಲವಾರು ಮಂದಿ ಅದನ್ನು ಪೂರ್ತಿ ಓದದೆಯೇ ಸಹಿ ಹಾಕಿ ಬಿಟ್ಟಿದ್ದಾರೆ. ಆದರೆ ಇದೊಂದು ಅಪಾಯಕಾರಿ ಮತ್ತು ನಮ್ಮ ದೇಶಕ್ಕೆ ಆಂತಕವೊದಗಿಸುವ ಸಂಗತಿ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇದು ನಿಜವಾಗಿಯೂ ಫೇಸ್ ಬುಕ್ ಸಿಇಒ ಮಾರ್ಕ್ ಜೂಕರ್‌ಬರ್ಗ್‌ನ ಕುತಂತ್ರ. ನಾವು ಈ ಫ್ರೀ ಬೇಸಿಕ್ಸ್ ಗೆ ಸಹಿ ಹಾಕಿದರೆ ನಮ್ಮ ಹಳ್ಳಿಗಳು ಉದ್ಧಾರವಾಗುವುದೂ ಇಲ್ಲ, ತಂತ್ರಜ್ಞಾನ ಬೆಳೆಯುವುದೂ ಇಲ್ಲ. ಇಲ್ಲಿ ಬೆಳೆಯುವುದು ಜೂಕರ್‌ಬರ್ಗ್ ಮಾತ್ರ! ಆದ್ದರಿಂದ ಇದಕ್ಕೆ ಸಹಿ ಹಾಕುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳುವುದು ಒಳಿತು.