ಉಡುಪಿ ಈಗ ಆ್ಯಪ್ ಅಭಿವೃದ್ಧಿ ತಾಣ

ಉಡುಪಿ ಹೋಟೆಲ್, ಶ್ರೀಕೃಷ್ಣ ದೇವಸ್ಥಾನ, ಕಡಲ ತೀರಕ್ಕಷ್ಟೆ ಅಲ್ಲ, ಈಗ ಐಎಸ್‍ಒ ಮತ್ತು ಆಂಡ್ರಾಯ್ಡ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವವರ ನೆಚ್ಚಿನ ತಾಣವೂ...
ಆಂಡ್ರಾಯ್ಡ್ ಆ್ಯಪ್
ಆಂಡ್ರಾಯ್ಡ್ ಆ್ಯಪ್

ಬೆಂಗಳೂರು: ಉಡುಪಿ ಹೋಟೆಲ್, ಶ್ರೀಕೃಷ್ಣ ದೇವಸ್ಥಾನ, ಕಡಲ ತೀರಕ್ಕಷ್ಟೆ ಅಲ್ಲ, ಈಗ ಐಎಸ್‍ಒ ಮತ್ತು ಆಂಡ್ರಾಯ್ಡ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವವರ ನೆಚ್ಚಿನ ತಾಣವೂ ಆಗಿದೆ. ರೋಬೊ ಸಾಫ್ಟ್, ಕೋಡ್‍ಕ್ರಾಫ್ಟ್, ಚಿಪ್ಸಿ ಮತ್ತು ರಿಸ್ಟ್‍ಕೋಡ್‍ನಂತಹ ಸಣ್ಣ ಕಂಪನಿಗಳು ಸಹ ಇಲ್ಲಿನ ಪ್ರತಿಭಾವಂತರನ್ನು ನೇಮಿಸಿಕೊಳ್ಳುತ್ತಿದೆ. ಉಡುಪಿ, ಮಣಿಪಾಲ ಮತ್ತು ಮಂಗಳೂರು ಸುತ್ತ ಹೆಚ್ಚು ಆ್ಯಪ್ ಅಭಿವೃದ್ಧಿ ಪಡಿಸುವವರು ಇದ್ದಾರೆ ಎಂದು ವರದಿ ಮಾಡಿದೆ. ಉಡುಪಿ-ಮಂಗಳೂರು ವ್ಯಾಪ್ತಿ ಯಲ್ಲಿ 20ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಇದು ಪ್ರತಿಭಾನ್ವಿತರನ್ನು ಪತ್ತೆಹಚ್ಚಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯವಾಗಿ ಬೆಳೆಯುತ್ತಿರುವ ಆರ್ಥಿಕತೆ, ಕಚೇರಿ ಬಾಡಿಗೆ ಕಡಿಮೆ ಇರುವುದು ಸೇರಿದಂತೆ ಹಲವು ಅವಕಾಶಗಳು ಇರುವುದು ಇದಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com