ಯೂಟ್ಯೂಬ್‌ನಿಂದ ಮಕ್ಕಳಿಗಾಗಿ ಹೊಸ ಆ್ಯಪ್

ಯುವಕರಿಂದಾಗಿ ಈಗಾಗಲೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಯೂಟ್ಯೂಬ್ ಈಗ ಮಕ್ಕಳಿಗಾಗಿ ಹೊಸ ಆ್ಯಪ್ ಒಂದನ್ನು ಹೊರ ತರಲು ಮುಂದಾಗಿದೆ...
ಯೂಟ್ಯೂಬ್ ಮಕ್ಕಳ ಹೊಸ ಅಪ್ಲಿಕೇಶನ್‌ನ ಸ್ಕ್ರೀನ್ ಶಾಟ್ ಚಿತ್ರ
ಯೂಟ್ಯೂಬ್ ಮಕ್ಕಳ ಹೊಸ ಅಪ್ಲಿಕೇಶನ್‌ನ ಸ್ಕ್ರೀನ್ ಶಾಟ್ ಚಿತ್ರ

ನವದೆಹಲಿ: ಯುವಕರಿಂದಾಗಿ ಈಗಾಗಲೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಯೂಟ್ಯೂಬ್ ಈಗ ಮಕ್ಕಳಿಗಾಗಿ ಹೊಸ ಆ್ಯಪ್ ಒಂದನ್ನು ಹೊರ ತರಲು ಮುಂದಾಗಿದೆ.

ಈ ಕುರಿತ ಅಪ್ಲಿಕೇಶನ್‌ನ ಸ್ಕ್ರೀನ್ ಶಾಟ್ ಚಿತ್ರವೊಂದನ್ನು ಗುರುವಾರ ರಾತ್ರಿ ಯೂಟ್ಯೂಬ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್‌ನಲ್ಲಿ ಮಕ್ಕಳ ಸ್ನೇಹಿ ಚಿತ್ರಗಳು, ವೀಡಿಯೋಗಳು ಇನ್ನಿತರೆ ಉಪಯೋಗವಾಗುವಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ವೀಡಿಯೋಗಳನ್ನು ಮಕ್ಕಳು ಕನಿಷ್ಟ ಎಷ್ಟು ಸಮಯದವರೆಗೂ ಕುಳಿತು ನೋಡುತ್ತಾರೆ ಎಂಬುದರ ಮೇಲೆ ವೀಡಿಯೋಗಳನ್ನು ಹಾಕಲಾಗಿದೆ ಎಂದು ಯೂಟ್ಯೂಬ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೂಟ್ಯೂಬ್ ಮಕ್ಕಳಿಗೆ ಹೊಸ ಆ್ಯಪ್ ತರುತ್ತಿರುವುದು ಒಂದು ಕಡೆ ಸಂತಸಕರ ವಿಷಯ ಆದರೆ ಈ ಸೌಲಭ್ಯ ಪ್ರಸ್ತುತ ಆ್ಯಪಲ್ ಫೋನ್, ಐ ಪ್ಯಾಡ್‌ನಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲೂ ಈ ಸೇವೆಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಫೆ. 23ರಂದು ಚಿಲ್ಡ್ರನ್ಸ್ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ನಡೆಯುವ ಕಿಡ್ ಸ್ಕ್ರೀನ್ ಶೃಂಗ ಸಭೆಯಲ್ಲಿ ಯೂಟ್ಯೂಬ್ ಸಂಸ್ಥೆಯ ಮುಖ್ಯಸ್ಥ ಮಲಿಕ್ ಡುಕಾರ್ಡ್ ಅವರು ಮಕ್ಕಳ ಯೂಟ್ಯೂಬ್ ಹೊಸ ಅಪ್ಲಿಕೇಶನ್‌ನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com