
೯ ವರ್ಷ ಹಳೆಯ ಗೂಗಲ್ ಟಾಕ್ ಸೇವೆಗೆ ಗೂಗಲ್ ಸಂಸ್ಥೆ ತೆರೆ ಎಳೆದಿದೆ. ೨೦೧೩ ರಲ್ಲಿ ಮಾರುಕಟ್ಟೆಗೆ ಬಂದ ಗೂಗಲ್ ಹ್ಯಾಂಗೌಟ್ ಜಿಟಾಕ್ ಅನ್ನು ಬದಲಾಯಿಸಲಿದೆ.
ಗೂಗಲ್ ನ ವಾಯ್ಸ್ ಮತ್ತು ಹ್ಯಾಂಗೌಟ್ ಗೆ ಉತ್ಪಾದಕ ನಿರ್ವಾಹಕರಾದ ಮಯೂರ್ ಕಾಮತ್ ಅವರು ಬ್ಲಾಗ್ ಪೋಸ್ಟ್ ನಲ್ಲಿ ಫೆಬ್ರವರಿ ೧೬ ರಂದು ಈ ಘೋಷಣೆ ಮಾಡಿದ್ದರು. ಫೆಬ್ರವರಿ ೨೩ ರಿಂದ ಈ ಸೇವೆ ಅಧಿಕೃತವಾಗಿ ಕೊನೆಗೊಂಡಿದೆ.
ಜಿಟಾಕ್ ನ ಪ್ರಮುಖ ಫೀಚರ್ ಗಳಾದ, 'ಕಾಣದಿರುವ' ಆಯ್ಕೆ, ಕಡತಗಳನ್ನು ಹಂಚಿಕೊಳ್ಳುವುದು, ಇವುಗಳು ಹ್ಯಾಂಗೌಟ್ ನಲ್ಲಿ ಇಲ್ಲವಾದ್ದರಿಂದ ಜಿಟಾಕ್ ಇಷ್ಟ ಪಡುವ ಬಳಕೆದಾರರಿಗೆ ನಿರಾಸೆ ತರಲಿದೆ.
Advertisement