
ಮುಂಬೈ: ಬರೋಬ್ಬರಿ ಏಳು ಸಾವಿರ ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ವಿಮಾನಗಳು ಇದ್ದವು. ಅವುಗಳಲ್ಲಿ ಜನರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುತ್ತಿದ್ದವು ಎಂದು ಕ್ಯಾ. ಆನಂದ್ ಜೆ. ಬೋದಾಸ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ 102ನೇ ಸಮಾವೇಶದ 2ನೇ ದಿನ ಮಾತನಾಡುತ್ತಿದ್ದರು. ವೈಮಾನಿಕ ತರಬೇತಿ ಕೇಂದ್ರವೊಂದರಲ್ಲಿ ತರಬೇತುದಾರರಾಗಿರುವ ಅವರ ಈ ಹೇಳಿಕೆ ಬಗ್ಗೆ ಕೆಲವೊಂದು ಮಾಧ್ಯಮಗಳಲ್ಲಿ ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಪ್ರಾಚೀನ ಭಾರತದಲ್ಲಿ ಇದ್ದ ವೈಮಾನಿಕ ತಂತ್ರಜ್ಞಾನಗಳ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದ್ದರು.
ಅಧಿಕೃತವಾಗಿ 1903ರಲ್ಲಿ ರೈಟ್ಸ್ ಸಹೋದರರು ವಿಮಾನ ಕಂಡು ಹಿಡಿದರು. ಆದರೆ ವೇದ ಕಾಲದಲ್ಲಿ ವಿಮಾನಗಳು ಇದ್ದ ಬಗ್ಗೆ ಉಲ್ಲೇಖವಿದೆ ಎಂದು ಅವರು ಹೇಳಿದ್ದಾರೆ. 'ವೈಮಾನಿಕ ಪ್ರಕರಣಂ' ಎಂಬ ಪುಸ್ತಕದಲ್ಲಿ ವೈಮಾನಿಕ ವಿಚಾರಗಳ ಬಗ್ಗೆ ಉಲ್ಲೇಖವಿದೆ ಎಂದಿದ್ದಾರೆ. ಪ್ರಾಚೀನ ವಿಮಾನದಲ್ಲಿ 40 ಸಣ್ಣ ಎಂಜಿನಗಳೂ ಇದ್ದವು. ಆದರೆ ಈಗಿನ ವಿಮಾನಗಳಲ್ಲಿ ಎಕ್ಸಾಸ್ಟ್ ಫ್ಯಾನ್ಗಳೂ ಇಲ್ಲ ಎಂದರು.
ರೇಡಾರ್ ವ್ಯವಸ್ಥೆ ಇತ್ತು: ಇದರ ಜತೆಗೆ ರೇಡಾರ್ ವ್ಯವಸ್ಥೆಯೂ ಇತ್ತು. ಅದನ್ನು ರೂಪಾರ್ಕಣ ರಹಸ್ಯ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು ಎಂದಿದ್ದಾರೆ. ಅದರಲ್ಲಿ ವೀಕ್ಷಕನಿಗೆ ವಿಮಾನದ ಆಕಾರವನ್ನು ಕೂಡಲಾಗುತ್ತಿತ್ತು. ಆಧುನಿಕ ವ್ಯವಸ್ಥೆಯಲ್ಲಿ ಸಣ್ಣ ವಿಮಾನದಂತೆ ಕಾಣುತ್ತದೆ ಎಂದು ಆನಂದ್ ಪ್ರತಿಪಾದಿಸಿದರು. ಇದರ ಜತೆಗೆ ಪೈಲಟ್ಗಳ ಆಹಾರ, ಉಡುಪಿನ ಬಗ್ಗೆ ಉಲ್ಲೇಖಗಳಿವೆ ಎಂದಿದ್ದಾರೆ. ಆದರೆ ಈ ಉಪನ್ಯಾಸ ರದ್ದು ಮಾಡಬೇಕೆಂದು ನಾಸಾದ ವಿಜ್ಞಾನಿಯೊಬ್ಬರು ಒತ್ತಾಯಿಸಿದ್ದರು.
Advertisement