ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್
ನಾವು ಅಂದುಕೊಂಡಿರುವುದಕ್ಕಿಂತಲೂ ಬೇಗನೇ ವಿದ್ಯುತ್ ಚಾಲಿತ ವಾಹನಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಲಭ್ಯವಾಗಲಿದೆ. ಇದು ಸಾಂಪ್ರದಾಯಿಕ ಚಾರ್ಜಿಂಗ್ ವ್ಯವಸ್ಥೆಗೆ ಬ್ರೇಕ್ ಹಾಕಲಿದೆ.
ಆಟೋಮೊಬೈಲ್ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯಾಗಿರುವ ಕ್ವಾಲ್ಕಾಮ್ ಹ್ಯಾಲೋ() 2017 ವರ್ಷಾರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಅಭಿವೃದ್ಧಿಪಡಿಸಲಿದೆಯಂತೆ.
ಕೇಬಲ್ ರಹಿತ ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಂನಲ್ಲಿ ಎರಡು ಚಾರ್ಜಿಂಗ್ ಪ್ಯಾಡ್‌ಗಳಿರಲಿದೆ. ಒಂದನ್ನು ನೆಲದಲ್ಲಿ ಮತ್ತೊಂದನ್ನು ಕಾರ್‌ನಲ್ಲಿ ಅಳವಡಿಸಲಾಗುವುದು. ನೆಲದ ಪ್ಯಾಡ್‌ನಿಂದ ಕಾರಿನ ಪ್ಯಾಡ್‌ಗೆ ಶಕ್ತಿ ರವಾನೆಯಾಗುವುದು.
ಆದರೆ ಈ ಹೊಸ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಗೆ ಎಷ್ಟು ವೆಚ್ಚ ತಗುಲಲಿದೆ ಎಂಬುದಕ್ಕೆ ಮಾಹಿತಿ ದೊರಕಿಲ್ಲ. ಪ್ರಸ್ತುತ ವ್ಯವಸ್ಥೆಯು ಮೊದಲು ಹೈ ಎಂಡ್ ಐಷಾರಾಮಿ ಕಾರುಗಳಲ್ಲಿ ಬಳಕೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ