
ಬೀಜಿಂಗ್: ಸಾಫ್ಟ್ವೇರ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆ ಈಗ ವಿಂಡೋಸ್ ೭ ಆಪರೇಟಿಂಗ್ ಸಿಸ್ಟಮ್ ಗೆ ಇನ್ನುಮುಂದೆ ನೆರವು ನೀಡುವುದಿಲ್ಲ ಎಂಬ ನಿರ್ಣಯವನ್ನು ಘೋಷಿಸಿರುವುದು, ಚೈನಾದಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಮೇಲೆ ನಡೆಯುತ್ತಿರುವ ೧೦ ಗಣಕಯಂತ್ರಗಳಲ್ಲಿ ೯ ಕ್ಕೆ ಇನ್ನು ಮುಂದೆ ಯಾವುದೇ ನೆರವಿಲ್ಲದಂತಾಗಿದೆ.
ನೆನ್ನೆಯ ಘೋಷಣೆಯಲ್ಲಿ ಮೈಕ್ರೋಸಾಫ್ಟ್, ವಿಂಡೋಸ್ ೭ ಗೆ ನೆರವನ್ನು ನಿಲ್ಲಿಸಿದೆ. ಹಾಗಾಗಿ ಈ ಒಎಸ್ ಮೇಲೆ ಯಾವುದೇ ಹೊಸ ಫೀಚರ್ ಗಳನ್ನು ಅಭಿವೃದ್ಧಿ ಮಾಡುವುದಿಲ್ಲ ಹಾಗೂ ಯಾವುದೇ ಒಎಸ್ ತೊಂದರೆಗೆ ಮೈಕ್ರೋಸಾಫ್ಟ್ ನ ಉಚಿತ ನೆರವು ಸಿಗುವುದಿಲ್ಲ ಎಂದಿದೆ. ಆದರೆ ೨೦೨೦ ರವರೆಗೆ ಭದ್ರತಾ ಸಂಬಂಧಿತ ತೊಂದರೆಗಳನ್ನು ಉಚಿತವಾಗಿ ಸರಿಪಡಿಸಲಾಗುತ್ತದೆ ಎನ್ನಲಾಗಿದೆ.
ಚೈನಾದಲ್ಲಿ ಶೇಕಡಾ ೩೮.೩ ಮಾರುಕಟ್ಟೆ ಹೊಂದಿರುವ ವಿಂಡೋಸ್ ೭ ಆಧಾರಿತ ಗಣಕಯಂತ್ರಗಳು, ಫೋನುಗಳು ಇನ್ನು ಮುಂದೆ ಮೈಕ್ರೋಸಾಫ್ಟ್ ನ ಯಾವುದೇ ಉಚಿತ ನೆರವು ಪಡೆಯುವುದಿಲ್ಲ. ಭದ್ರತಾ ಕಾರಣಗಳಿಂದ ಚೈನಾ ಸರ್ಕಾರ ವಿಂಡೋಸ್ ೮ ಆಪರೇಟಿಂಗ್ ಸಿಸ್ಟಮ್ ಅನ್ನು ನಿಷೇಧಿಸಿತ್ತು. ಈಗ ಇದರ ಬಗ್ಗೆ ಮರು ವಿಚಾರಣೆ ಮಾಡುವುದಾಗಿ ಚೈನಾ ಸರ್ಕಾರ ತಿಳಿಸಿದೆ ಎನ್ನಲಾಗಿದೆ.
Advertisement