ಅಂತರ್ಜಾಲ (ಸಾಂದರ್ಭಿಕ ಚಿತ್ರ)
ಅಂತರ್ಜಾಲ (ಸಾಂದರ್ಭಿಕ ಚಿತ್ರ)

ಅಂತರ್ಜಾಲ ಅದೃಶ್ಯವಾಗುತ್ತೆ: ಎರಿಕೆ ಶೆಮಿಟ್

ಮುಂದೊಂದು ದಿನ ಅಂತರ್ಜಾಲ ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿ ಬಿಡುತ್ತದೆ...
Published on

ದಾವೋಸ್: ಮುಂದೊಂದು ದಿನ ಅಂತರ್ಜಾಲ ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿ ಬಿಡುತ್ತದೆ. ಅದರ ಜೊತೆಗೆ ನಾವು ಪ್ರತಿ ದಿನ, ಪ್ರತಿ ಕ್ಷಣ ಒಡನಾಡುತ್ತಿರುತ್ತೇವೆ.

ಅದೇ ನಮ್ಮ ಹೊಸ ಲೋಕ ಆಗುತ್ತದೆ. ಆದರೆ ಆಗ ಅಂತರ್ಜಾಲ ಅನ್ನುವುದು ಭೌತಿಕ ಅಸ್ತಿತ್ವವೇ ಇಲ್ಲದಷ್ಟು ಅಗೋಚರವಾಗಿ ಬಿಡುತ್ತದೆ ಎನ್ನುತ್ತಾರೆ ಗೂಗಲ್ ಮುಖ್ಯಸ್ಥ
ಎರಿಕ್‍ಶೆಮಿಟ್.

ನಮ್ಮ ಪ್ರತಿ ಕೆಲಸವೂ ಅಂತರ್ಜಾಲವನ್ನೇ ಅವಲಂಬಿಸಿರುತ್ತದೆ. ಆದರೆ, ಭವಿಷ್ಯದಲ್ಲಿ ಅಳವಡಿಸಲ್ಪಡುವ ಸೆನ್ಸರ್‍ಗಳು, ಉಪಕರಣಗಳು ನಾವು ಅದನ್ನು ಗ್ರಹಿಸಲೂ ಸಾಧ್ಯ
ವಾಗದಷ್ಟು ರೂಪಾಂತರ ಮಾಡಲಿವೆ. ಅದು ನಮ್ಮ ಸುತ್ತಮುತ್ತ ಇರುತ್ತದೆ. ಆದರೆ, ನಮ್ಮ ಗ್ರಹಿಕೆಗೆ ನಿಲುಕದಷ್ಟು ರೂಪಾಂತರಗೊಂಡಿರುತ್ತದೆ ಎಂದು ಎರಿಕ್ ಅಭಿಪ್ರಾಯಪಡುತ್ತಾರೆ. ನೀವು ಕೋಣೆಯೊಳಗೆ ಹೋಗುತ್ತೀರಿ.

ಅಲ್ಲಿನ ಪ್ರತಿ ವಸ್ತುಗಳ ಜತೆಗೆ ಸಂವಹನ ನಡೆಸುತ್ತಿರುತ್ತೀರಿ. ಒಂದು ರೀತಿ ಅಂತರ್ಜಾಲ ತೀರಾ ವೈಯಕ್ತಿಕ, ಪರಸ್ಪರ ಸಂವಹನ ಸಾಧ್ಯವಾಗುವ, ಆಸಕ್ತಿಕರ ಜಗತ್ತಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾರೆ ಎರಿಕ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com