ಪಾಸ್ ವರ್ಡ್ ಬದಲು ಸೆಲ್ಫಿ ಮೂಲಕ ಆನ್ ಲೈನ್ ಪಾವತಿ ಪರಿಶೀಲನೆ ವ್ಯವಸ್ಥೆ!

ಆನ್ ಲೈನ್ ವ್ಯವಹಾರಗಳಲಲ್ಲಿ ಬಳಕೆದಾರರ ಗುರುತನ್ನು ಖಚಿತಪಡಿಸಲು ಮಾಸ್ಟರ್ ಕಾರ್ಡ್ ಸಂಸ್ಥೆ ಹೊಸ ಸ್ಮಾರ್ಟ್ ಫೋನ್ ಆಪ್ ಅಭಿವೃದ್ಧಿಪಡಿಸಲು ಮುಂದಾಗಿದೆ.
ಆನ್ ಲೈನ್ ಶಾಪಿಂಗ್(ಸಾಂಕೇತಿಕ ಚಿತ್ರ)
ಆನ್ ಲೈನ್ ಶಾಪಿಂಗ್(ಸಾಂಕೇತಿಕ ಚಿತ್ರ)

ವಾಷಿಂಗ್ ಟನ್: ಆನ್ ಲೈನ್ ಪಾವತಿ ವೇಳೆ ಬಳಕೆದಾರರ ಗುರುತನ್ನು ಖಚಿತಪಡಿಸಲು ಮಾಸ್ಟರ್ ಕಾರ್ಡ್ ಸಂಸ್ಥೆ ಹೊಸ ಸ್ಮಾರ್ಟ್ ಫೋನ್ ಆಪ್ ಅಭಿವೃದ್ಧಿಪಡಿಸಲು ಮುಂದಾಗಿದೆ.

ಆನ್ ಲೈನ್ ಮೂಲಕ ವಹಿವಾಟು ನಡೆಸುವವರು ಮಾಸ್ಟರ್ ಕಾರ್ಡ್ ಫೋನ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಿದ್ದು ಫೋಟೊ ಕ್ಲಿಕ್ಕಿಸಬೇಕಾಗುತ್ತದೆ. ಸೆಲ್ಫಿಗೆ ಮನಸೋತಿರುವ ಯುವಜನತೆ ಮಾಸ್ಟರ್ ಕಾರ್ಡ್ ನ ಈ ಹೊಸ ಪ್ರಯೋಗವನ್ನು ಸ್ವಾಗತಿಸುತ್ತಾರೆ ಎಂದು  ಅಮೆರಿಕನ್ ಹಣಕಾಸಿನ ಸೇವೆಗಳ ಕಂಪನಿ ಮಾಸ್ಟರ್ ಕಾರ್ಡ್ ನ ಭದ್ರತಾ ತಜ್ಞ ಅಜಯ್ ಭಲ್ಲ  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಆನ್ ಲೈನ್ ಶಾಪಿಂಗ್ ಮಾಡುವವರು ಸೆಕ್ಯೂರ್ ಕೋಡ್ ಗಳನ್ನು ಹೊಂದಿರಬೇಕಾಗುತ್ತದೆ. ಪಾಸ್ ವರ್ಡ್ ಗಳು ಮರೆತುಹೋಗಬಹುದು, ಇಲ್ಲವೇ ಕಳ್ಳತನವಾಗಬಹುದು ಅಥವಾ ಅದನ್ನು ತಡೆಹಿಡಿಯಬಹುದು, ಆದರೆ ಮೈಕ್ರೋಸಾಫ್ಟ್ ಪ್ರಾರಂಭಿಸುತ್ತಿರುವ ಆಪ್ ನಲ್ಲಿ ಬೆರಳಚ್ಚು, ಫೇಶಿಯಲ್ ಸ್ಕ್ಯಾನ್ ಸೌಲಭ್ಯವನ್ನು ಪಾಸ್ ವರ್ಡ್ ಕೋಡ್ ಆಗಿ ಬಳಕೆ ಮಾಡಲಾಗುತ್ತದೆ.

ಎಲ್ಲಾ ಸ್ಮಾರ್ಟ್ ಫೋನ್ ಉತ್ಪಾದಕ ಸಂಸ್ಥೆಯೊಂದಿಗೂ ಮಾಸ್ಟರ್ ಕಾರ್ಡ್ ಮಾತುಕತೆ ನಡೆಸಲಿದ್ದು ಈ ಮಾದರಿಯ ಪರಿಶೀಲನೆ ಸಾಧ್ಯವಾಗಿಸಲು ಸಹಭಾಗಿತ್ವವನ್ನು ಪಡೆಯಲಿದೆ. ಇದೇ ವೇಳೆ ಧ್ವನಿ ಗುರುತಿಸುವಿಕೆ ವ್ಯವಸ್ಥೆಯನ್ನೂ ಜಾರಿಗೆ ತರಲು ಮಾಸ್ಟರ್ ಕಾರ್ಡ್ ಉದ್ದೇಶಿಸಿದೆ. ತಮ್ಮ ಧ್ವನಿ ಮೂಲಕ ಆನ್ ಲೈನ್ ಪಾವತಿಗಳನ್ನು ಅನುಮೋದಿಸುವ ವ್ಯವಸ್ಥೆ ಶೀಘ್ರವೆ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com