ನಾಯಿಗಳಿಗಾಗಿ ಬಂದಿದೆ ಡೇಟಿಂಗ್ ಆಪ್!

ನಾಯಿಗಳಿಗಾಗಿ ಬಂದಿದೆ ಡೇಟಿಂಗ್ ಆಪ್!

ಎವ್ರಿ ಡಾಗ್ ಹ್ಯಾಸ್ ಇಟ್ಸ್ ಡೇ ಎಂಬ ಗಾದೆ ಕೇಳಿರುತ್ತೀರಿ, ಅದು ಹಿಂದಿನ ಕಾಲದ ಮಾತಾಯಿತು. ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎವ್ರಿ ಡಾಗ್ ಹ್ಯಾಸ್ ಇಟ್ಸ್ ಮ್ಯಾಚ್ ಎಂದಾಗುತ್ತದೆ.

ಲಂಡನ್: "ಎವ್ರಿ ಡಾಗ್ ಹ್ಯಾಸ್ ಇಟ್ಸ್ ಡೇ ಎಂಬ ಗಾದೆ ಕೇಳಿರುತ್ತೀರಿ, ಅದು ಹಿಂದಿನ ಕಾಲದ ಮಾತಾಯಿತು. ತಂತ್ರಜ್ಞಾನಕ್ಕೆ ತಕ್ಕಂತೆ ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎವ್ರಿ ಡಾಗ್ ಹ್ಯಾಸ್ ಇಟ್ಸ್ ಮ್ಯಾಚ್" ಎಂದಾಗುತ್ತದೆ. ಯಾಕೆ ಅಂದ್ರಾ? ನಾಯಿಗಳಿಗಾಗಿಯೆ ಪ್ರತ್ಯೇಕವಾದ ಡೇಟಿಂಗ್ ಆಪ್ ಬಿಡುಗಡೆಯಾಗಲಿರುವುದರಿಂದ ಹೀಗೆ ಹೇಳಬೇಕಿದೆ.

ಲಂಡನ್ ಮೂಲದ ಕಂಪನಿಯೊಂದು, ನಾಯಿಗಳಿಗಾಗಿಯೆ ಡೇಟಿಂಗ್ ಅಪ್ಲಿಕೇಶನ್ ನ್ನು ತಯಾರು ಮಾಡುತ್ತಿದ್ದು ಟಿನ್ ಡಾಗ್ ಎಂಬ ಹೆಸರಿಡಲಾಗಿದೆ. ಈ ಆಪ್ ನನ್ನು ಬಳಕೆ ಮಾಡುವವರು ತಮ್ಮ ನಾಯಿಗಳಿಗಾಗಿ ಜೋಡಿಯನ್ನು ಹುಡುಕಬಹುದಾಗಿದೆ ಎಂದು ಇಂಟರ್ನ್ಯಾಷನಲ್ ಬಿಸಿನೆಸ್ ಟೈಮ್ಸ್ ವರದಿ ಮಾಡಿದೆ.

ನಾಯಿಗಳು ಮನುಷ್ಯರೊಂದಿಗೆ ಅತ್ಯಂತ ವೇಗವಾಗಿ ಸ್ನೇಹ ಬೆಳೆಸಿಕೊಳ್ಳುತ್ತವೆ, ಆದ್ದರಿಂದಲೇ ನಾಯಿ ಪ್ರೇಮಿಗಳು ತಮ್ಮಂತೆಯೇ ನಾಯಿಗಳನ್ನು ಪ್ರೀತಿಸುವ ವ್ಯಕ್ತಿಗಳನ್ನು ಭೇಟಿ ಮಾಡುವುದಕ್ಕಾಗಿ ಈ ಆಪ್ ನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಆಪ್ ಅಭಿವೃದ್ಧಿಪಡಿಸುತ್ತಿರುವ ಕಂಪನಿಯ ಸಿಇಒ ತಿಳಿಸಿದ್ದಾರೆ.

ತಮ್ಮ ನಾಯಿಗಳು ಪರಸ್ಪರ ಮ್ಯಾಚ್ ಆದರೆ ನಾಯಿಗಳ ಮಾಲೀಕರು ಈ ಆಪ್ ಮೂಲಕ ಚಾಟ್ ಮಾಡಬಹುದಾಗಿದೆ. ಇದು ಮತ್ತೊಬ್ಬರೊಂದಿಗೆ ಸ್ನೇಹ ಬೆಳೆಸಲು ನಾಯಿಗಳಿಗಷ್ಟೇ ಅಲ್ಲದೆ ನಾಯಿಗಳ ಮಾಲಿಕರಿಗೂ ಅನುಕೂಲವಾಗಲಿದೆ ಎಂದು ಸಿಇಒ  ಜೂಲಿಯನ್ ಮುಲ್ಲರ್ ಅಭಿಪ್ರಾಯಪಟ್ಟಿದ್ದಾರೆ. ಆಂಡ್ರಾಯ್ಡ್ ಹಾಗೂ ಐಒಎಸ್  ಸಾಧನಗಳಲ್ಲಿ ಈ ಆಪ್ ಉಚಿತವಾಗಿ ದೊರೆಯಲಿದೆ.

Related Stories

No stories found.

Advertisement

X
Kannada Prabha
www.kannadaprabha.com