ಫೇಸ್ಬುಕ್ಕಿನ ಸಣ್ಣ ಬದಲಾವಣೆ ಲೈಂಗಿಕ ಸಮಾನತೆಯೆಡೆಗೆ ದೊಡ್ಡ ಹೆಜ್ಜೆ

ಇತ್ತೀಚೆಗಷ್ಟೇ ಫೇಸ್ಬುಕ್ ಲೋಗೋ ಸ್ವಲ್ಪ ಬದಲಾವಣೆಯಾಗಿದ್ದು ನಿಮಗೆ ತಿಳಿದಿರಬೇಕಷ್ಟೇ! ಆದರೆ ಫೇಸ್ಬುಕ್ ಪುಟ ತೆಗೆದಾಗ ಉತ್ತರ ಬಲ ಮೂಲೆಯಲ್ಲಿ ಕಾಣುವ 'ಫ್ರೆಂಡ್ಸ್' ಐಕಾನ್
ಬದಲಾದ ಫೇಸ್ಬುಕ್ ಫ್ರೆಂಡ್ಸ್ ಐಕಾನ್
ಬದಲಾದ ಫೇಸ್ಬುಕ್ ಫ್ರೆಂಡ್ಸ್ ಐಕಾನ್

ಇತ್ತೀಚೆಗಷ್ಟೇ ಫೇಸ್ಬುಕ್ ಲೋಗೋ ಸ್ವಲ್ಪ ಬದಲಾವಣೆಯಾಗಿದ್ದು ನಿಮಗೆ ತಿಳಿದಿರಬೇಕಷ್ಟೇ! ಆದರೆ ಫೇಸ್ಬುಕ್ ಪುಟ ತೆಗೆದಾಗ ಉತ್ತರ ಬಲ ಮೂಲೆಯಲ್ಲಿ ಕಾಣುವ 'ಫ್ರೆಂಡ್ಸ್' ಐಕಾನ್ ನಲ್ಲಾಗಿರುವ ಬದಲಾವಣೆ ಗಮನಿಸಿದ್ದೀರಾ? ಮೇಲಿನ ಚಿತ್ರವನ್ನೊಮ್ಮೆ ಸೂಕ್ಷ್ಮವಾಗಿ ನೋಡಿ.

ಎಡಭಾಗದ ಲೋಗೋನಲ್ಲಿ ಪುರುಷನನ್ನು ದೊಡ್ಡದಾಗಿ ಬಿಂಬಿಸಿ ಮಹಿಳೆಯನ್ನು ಹಿಂಬದಿಗೆ ಸರಿಸಲಾಗಿದೆ. ಆದರೆ ಹೊಸದಾಗಿ ಬದಲಾದ ಲೋಗೋವಿನಲ್ಲಿ ಇಬ್ಬರ ಆಕಾರವು ಒಂದೇ ಆಗಿದ್ದು ಮಹಿಳೆಯನ್ನು ಮುಂದಕ್ಕೆ ತರಲಾಗಿದೆ.

ಇದು ಅತಿ ಸಣ್ಣ ಬದಲಾವಣೆಯಂತೆ ಕಂಡರೂ, ಲೈಂಗಿಕ ಸಮಾನತೆಯ ಸಂಕೇತವಾಗಿ ಬೃಹತ್ ಹೆಜ್ಜೆ ಎಂದೇ ಬಣ್ಣಿಸಲಾಗುತ್ತಿದೆ. ಈ ಬದಲಾವಣೆ ಗ್ರೂಪ್ಸ್ ಇಕಾನ್ ನಲ್ಲೂ ಬಂದಿದ್ದು ಮಹಿಳೆಯನ್ನು ಮತ್ತೆ ಮುಂದಕ್ಕೆ ತರಲಾಗಿದೆ. ಈ ಬದಲಾವಣೆಗೆ ಫೇಸ್ಬುಕ್ ನ ಮುಖ್ಯ ವಿನ್ಯಾಸಗಾರ್ತಿ ಕ್ಯಾಟಲಿನ್ ವಿನ್ನರ್ ಅವರೇ ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com