ಪ್ಲೂಟೋ ಫೋಟೋ ತೆಗೆದ ನ್ಯೂ ಹೊರೈಜನ್ ಸ್ಪೇಸ್‍ಕ್ರಾಫ್ಟ್

ಜುಲೈ 14 ಖಗೋಳ ವಿಜ್ಞಾನದ ಪಾಲಿಗೆ ಸ್ಮರಣೀಯ ದಿನ. ಮಂಗಳಯಾನ ಮಾಡಿದ ಮರೈನರ್ ನೌಕೆ 50ವರ್ಷ ಪೂರೈಸುವ ಹೊತ್ತಲ್ಲೇ...
ಪ್ರೋಬ್ ಕ್ಯಾಮರಾ ಪ್ಲೂಟೋದ ಅತ್ಯಂತ ಸಮೀಪದ ಫೋಟೋಗಳನ್ನು ಸೆರೆ ಹಿಡಿದ ಚಿತ್ರಗಳಲ್ಲಿ ಒಂದು
ಪ್ರೋಬ್ ಕ್ಯಾಮರಾ ಪ್ಲೂಟೋದ ಅತ್ಯಂತ ಸಮೀಪದ ಫೋಟೋಗಳನ್ನು ಸೆರೆ ಹಿಡಿದ ಚಿತ್ರಗಳಲ್ಲಿ ಒಂದು

ಲಾರೆಲ್: ಜುಲೈ 14 ಖಗೋಳ ವಿಜ್ಞಾನದ ಪಾಲಿಗೆ ಸ್ಮರಣೀಯ ದಿನ. ಮಂಗಳಯಾನ ಮಾಡಿದ ಮರೈನರ್ ನೌಕೆ 50ವರ್ಷ ಪೂರೈಸುವ ಹೊತ್ತಲ್ಲೇ ಇತ್ತ ನಾಸಾದ ನ್ಯೂ ಹೊರೈಜಾನ್ ಸ್ಪೇಸ್‍ಕ್ರಾಫ್ಟ್, ಭೂಮಿಯ ಪಾಲಿನ ಅತಿ ದೂರದ ಗ್ರಹ ಪ್ಲೂಟೋ ಮೂಲಕ ಹಾದು ಹೋಗುವುದರ ಮೂಲಕ ಮೊದಲ ಬಾರಿಗೆ ಸೌರಮಂಡಲದ ಕೊನೆಯಗ್ರಹವನ್ನು ಅತ್ಯಂತ ಸನಿಹದಿಂದ ನೋಡಿದ ದಾಖಲೆ ನಿರ್ಮಿಸಿದೆ.

ಅಷ್ಟೇ ಅಲ್ಲ, ಅದರ ಪ್ರೋಬ್ ಕ್ಯಾಮರಾ ಪ್ಲೂಟೋದ ಅತ್ಯಂತ ಸಮೀಪದ ಫೋಟೋಗಳನ್ನು ಸೆರೆ ಹಿಡಿದು ಕಳಿಸಿದೆ. ಈ ಅಮೋಘ ಸಾಧನೆಯಿಂದ ನಾಸಾ ಮಾತ್ರವಲ್ಲ ಇಡೀ ಖಗೋಳ ಶಾಸ್ತ್ರ ಜಗತ್ತೇ ಬೆರಗುಗೊಂಡಿದೆ. ಪ್ಲೂಟೋಗೆ ಸುಮಾರು 12500 ಕಿಮೀ ದೂರದಲ್ಲಿ ಹಾದುಹೋಗಿರುವ ನ್ಯೂಹೊರೈಜನ್ ಯುಕೆ ಕಾಲಮಾನ ಮಧ್ಯಾಹ್ನ 12.49ರ ಹೊತ್ತಿಗೆ ತನ್ನ ಫೋಟೋಗ್ರಫಿ ಆರಂಭಿಸಿ, ಹಲವು ಕೋನಗಳಿಂದ ಪ್ಲೂಟೋ ಮೇಲ್ಮೈಯನ್ನು ನೋಡುವ ಅವಕಾಶ ಒದಗಿಸಿದೆ.

ಇದರೊಂದಿಗೆ ಪ್ಲೂಟೋ ಗ್ರಹದ ಗಾತ್ರದ ಬಗ್ಗೆ ಇದ್ದ ಚರ್ಚೆಗೂ ಹೊಸರೂಪ ದೊರೆತಿದೆ. ಈ ಕುಬ್ಜ ಗ್ರಹ ಈವರೆಗೆ ಖಗೋಳ ತಜ್ಞರು ಅಂದಾಜು ಮಾಡಿದ್ದಕ್ಕಿಂತ ತುಂಬ ದೊಡ್ಡದಿದೆಯೆಂದು ನಾಸಾದ ನ್ಯೂಹೊರೈಜಾನ್ ಮಾಹಿತಿ ನೀಡಿದ್ದು ಪ್ಲೂಟೋ 2,370ಕಿಮೀ ವ್ಯಾಸ ಹೊಂದಿದೆಯೆಂದು ತಿಳಿಸಿದೆ.

ಪ್ಲೂಟೋ ಫೋಟೋ ಸಿಗುತ್ತಿರುವ ಖುಷಿಯನ್ನು ಹೆಚ್ಚು ಸಂಭ್ರಮಿಸಿದ್ದು ಗೂಗಲ್. ಕೆವಿನ್ ಲಾಫ್ಲಿನ್ ಚಿಕ್ಕದೊಂದು ಅನಿಮೇಶನ್ ಮಾಡಿ ಡೂಡಲ್ ಮಾಡುವ ಮೂಲಕ ಇಡೀ ಜಗತ್ತಿಗೆ ಈ ಸುದ್ದಿ ತಿಳಿಯುವಂತೆ ಮಾಡಿದ್ದಾರೆ. ಪ್ಲೂಟೋವಿನತ್ತ ಹೋಗುತ್ತಿರುವ ನ್ಯೂಹೊರೈಜಾನ್‍ನ ಚಿತ್ರಣವನ್ನು ತುಂಬ ಸರಳವಾಗಿ ಡೂಡಲ್ ತಿಳಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com