ಸೂರ್ಯನ ಅಧ್ಯಯನಕ್ಕೆ `ಮಿಷನ್ ಆದಿತ್ಯ'

ಮಂಗಳ ಯಾನದ ಯಶಸ್ಸಿನಲ್ಲಿರುವ ಇಸ್ರೋ ವಿಜ್ಞಾನಿಗಳು ಮತ್ತಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಭಾನುವಾರ ಖಾಸಗಿ ಆಂಗ್ಲ ಪತ್ರಿಕೆ ವರದಿ ಪ್ರಕಟಿಸಿದೆ...
ಮಿಷನ್ ಆದಿತ್ಯ (ಸಾಂದರ್ಭಿಕ ಚಿತ್ರ)
ಮಿಷನ್ ಆದಿತ್ಯ (ಸಾಂದರ್ಭಿಕ ಚಿತ್ರ)
ನವದೆಹಲಿ: ಮಂಗಳ ಯಾನದ ಯಶಸ್ಸಿನಲ್ಲಿರುವ ಇಸ್ರೋ ವಿಜ್ಞಾನಿಗಳು ಮತ್ತಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಭಾನುವಾರ ಖಾಸಗಿ ಆಂಗ್ಲ ಪತ್ರಿಕೆ ವರದಿ  ಪ್ರಕಟಿಸಿದೆ.
ಮಂಗಳಕ್ಕೆ ಇನ್ನೊಂದು ಭೇಟಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಜೊತೆಯಲ್ಲೇ ಶುಕ್ರಯಾನ, ಕ್ಷುದ್ರಗಹಗಳ ಅಧ್ಯಯನಗಳೂ ಸರತಿಯಲ್ಲಿವೆ. ಆದರೆ ಎಲ್ಲಕ್ಕಿಂತ ಮೊದಲು 2017-18ರಲ್ಲಿ  ಇನ್ನೊಂದು ಚಂದ್ರಯಾನ ಯೋಜನೆಗೆ ನೀಲನಕ್ಷೆ ತಯಾರಾಗಿದ್ದು, ಈ ಬಾರಿ ಇನ್ನಷ್ಟು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ, ಹೆಚ್ಚಿನ ತಾಂತ್ರಿಕ ಸಾಮಥ್ರ್ಯದೊಂದಿಗೆ ಈ ಯೋಜನೆ  ಕಾರ್ಯಗತಗೊಳಿಸುವ ಹುಮ್ಮಸ್ಸಿನಲ್ಲಿ ಇಸ್ರೋ ಕೆಲಸ ಮಾಡುತ್ತಿದೆ. ಚಂದ್ರಯಾನ-2ರಲ್ಲಿ ಚಂದ್ರನ ಮೇಲ್ಮೈಯಲ್ಲಿ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್‍ಗಳಿರಲಿದ್ದು ಖನಿಜಾಧ್ಯಯನ ಹಾಗೂ ಧಾತುರೂಪದ ಅಧ್ಯಯನ ಕೈಗೊಳ್ಳಲಿದೆ.
ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಉದ್ದೇಶಿಸಿರುವ ಇಸ್ರೋ ``ಆದಿತ್ಯ ಮಿಷನ್'' ಎಂಬ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಅದರ ಮೂಲಕ ಸೂರ್ಯನ ಕ್ರೋಮೋಸ್ಪಿಯರ್  ಮತ್ತು ಕೊರೊನಾಗಳಲ್ಲಿ ಸೋಲಾರ್ ಡೈನಮಿಕ್ಸ್ ಅಧ್ಯಯನಕ್ಕೆ ಮುಂದಾಗಿದೆ. ಡಿಸೆಂಬರ್ 2016ಕ್ಕೆ ಸಾರ್ಕ್ ಉಪಗ್ರಹದ ಉಡಾವಣೆ ಜತೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಜತೆಗೆ  ಹಲವು ಮಹತ್ವದ ಬಾಹ್ಯಾಕಾಶ ಸಂಸ್ಥೆ ಜತೆಗೆ ಹಲವು ಮಹತ್ವಕಾಂಕ್ಷಿ ಸಂಶೋಧನೆ ನಡೆಸಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com