ನವದೆಹಲಿ: ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ತನ್ನ ತಾಣದ ಮುಖಪುಟದಲ್ಲಿ ಕಪ್ಪು ರಿಬ್ಬನ್ ಪ್ರದರ್ಶಿಸುವುದರ ಮೂಲಕ ದಿವಂಗತ ಭಾರತ ರಾಷ್ಟ್ರಪತಿ ಮತ್ತು ವಿಜ್ಞಾನಿ ಎ ಪಿ ಜೆ ಅಬ್ದುಲ್ ಕಲಾಮ್ ಅವರಿಗೆ ಗೌರವ ತೋರಿದೆ.
ಶಿಲ್ಲಾಂಗ್ ನ ಭಾರತೀಯ ಪ್ರಬಂಧಕ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ವೇಳೆ ಹೃದಯಾಘಾತದಿಂದ ಕಲಾಂ ನಿಧನರಾಗಿದ್ದರು. ಇಂದು ತಮಿಳುನಾಡಿನ ರಾಮೇಶ್ವರದಲ್ಲಿ ಅಂತಿಮ ವಿಧಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
Advertisement