ವಿಶ್ವದ ಆನ್ ಲೈನ್ ಜನಸಂಖ್ಯೆಯ ಅರ್ಧದಷ್ಟು ಜನರಿಂದ ಫೇಸ್ ಬುಕ್ ಬಳಕೆ

ವಿಶ್ವದ ಆನ್ ಲೈನ್ ಜನಸಂಖ್ಯೆಯ ಅರ್ಧದಷ್ಟು ಜನ ಕನಿಷ್ಠ ತಿಂಗಳಿಗೊಮ್ಮೆಯಾದರೂ ಫೇಸ್ ಬುಕ್ ಗೆ ಲಾಗ್ ಆನ್ ಮಾಡುತ್ತಾರೆ ಎಂದು ಖ್ಯಾತ ಸಾಮಾಜಿಕ ಜಾಲತಾಣ ಹೇಳಿದೆ.
ಫೇಸ್ ಬುಕ್
ಫೇಸ್ ಬುಕ್

ವಾಷಿಂಗ್ ಟನ್: ವಿಶ್ವದ ಆನ್ ಲೈನ್ ಜನಸಂಖ್ಯೆಯ ಅರ್ಧದಷ್ಟು ಜನ ಕನಿಷ್ಠ ತಿಂಗಳಿಗೊಮ್ಮೆಯಾದರೂ ಫೇಸ್ ಬುಕ್ ಗೆ ಲಾಗ್ ಆನ್ ಮಾಡುತ್ತಾರೆ ಎಂದು ಖ್ಯಾತ ಸಾಮಾಜಿಕ ಜಾಲತಾಣ ಹೇಳಿದೆ.

 ಫೇಸ್ ಬುಕ್ ನೀಡಿರುವ ಅಂಕಿಅಂಶದ ಪ್ರಕಾರ, ತಿಂಗಳಿಗೊಮ್ಮೆಯಾದರೂ ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆ  ಕಳೆದ ಮೂರು ತಿಂಗಳಲ್ಲಿ ಹೆಚ್ಚಾಗಿದೆಯಂತೆ. ಈ ವರ್ಷದ ಜೂನ್ ಅಂತ್ಯದವರೆಗೆ ಬಳಕೆದಾರರ ಸಂಖ್ಯೆ ಶೇ.13 ರಷ್ಟು ಹೆಚ್ಚಾಗಿದೆ. ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆ, ಜಾಗತಿಕ  ಮಟ್ಟದಲ್ಲಿ ಇಂಟರ್ ನೆಟ್ ಬಳಕೆ ಮಾಡುವವರ ಒಟ್ಟಾರೆ ಸಂಖ್ಯೆಯ ಅರ್ಧದಷ್ಟಾಗಿದೆ ಎಂದು ಫೆಸ್ ಬುಕ್ ಹೇಳಿದೆ. ಅಂದರೆ ಜಗತ್ತಿನಾದ್ಯಂತ ಮೂರು ಬಿಲಿಯನ್ ಜನರು ಅಂತರ್ಜಾಲವನ್ನು ಬಳಕೆ ಮಾಡುತ್ತಿದ್ದು ಇದರ ಅರ್ಧದಷ್ಟು ಜನರು(1 .49 ) ಬಿಲಿಯನ್ ಜನರು ಫೇಸ್ ಬುಕ್ ಖಾತೆ ಹೊಂದಿದ್ದಾರೆ.

ಪ್ರತಿ ಐದು ನಿಮಿಷದಲ್ಲಿ ಒಂದು ನಿಮಿಷ ಜನರು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ.  ತಿಂಗಳಲ್ಲಿ ಒಂದು ಬಾರಿ ಮೊಬೈಲ್ ಮೂಲಕವೇ ಫೇಸ್ ಬುಕ್ ಗೆ ಲಾಗ್ ಆನ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಬಿಸಿ ವರದಿ ತಿಳಿಸಿದೆ. ಬಳಕೆದಾರರು ಹೆಚ್ಚಿರುವುದರಿಂದ ಕಂಪನಿಯ ಎರಡನೇ ತ್ರೈಮಾಸಿಕದ ಆದಾಯ ಏರಿಕೆಯಾಗಿದೆ. ಫೇಸ್ ಬುಕ್ ಗೆ ಜಾಹಿರಾತಿನಿಂದ ಆದಾಯಯೂ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com