ಕನ್ನಡ ಭಾಷೆಯಲ್ಲೂ ಬಂತು ಟ್ವಿಟ್ಟರ್

ಜಗತ್ತಿನ ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಕನ್ನಡ ಸೇರಿದಂತೆ ಇನ್ನಷ್ಟು ಭಾರತೀಯ ಭಾಷೆಗಳನ್ನು ಅಳವಡಿಸಿಕೊಂಡಿದ್ದು...
ಟ್ವೀಟರ್
ಟ್ವೀಟರ್

ಮುಂಬೈ: ಜಗತ್ತಿನ ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಕನ್ನಡ ಸೇರಿದಂತೆ ಇನ್ನಷ್ಟು ಭಾರತೀಯ ಭಾಷೆಗಳನ್ನು ಅಳವಡಿಸಿಕೊಂಡಿದ್ದು, ಇನ್ನುಂದೆ ಕನ್ನಡಿಗರು ಕನ್ನಡಲ್ಲೇ ಟ್ವೀಟ್ ಮಾಡಬಹುದಾಗಿದೆ.

ಟ್ವಿಟ್ಟರ್'ಗೆ ಪ್ರಾದೇಶಿಕ ಭಾಷೆಗಳಾದ ಕನ್ನಡ, ಗುಜರಾತಿ, ಮರಾಠಿ ಮತ್ತು ತಮಿಳು ಭಾಷೆಗಳು ಈಗ ಹೊಸದಾಗಿ ಸೇರ್ಪಡೆಯಾಗಿವೆ ಎಂದು ಜಾಲತಾಣದ ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಭಾಷೆಗಳನ್ನು ಸಪೋರ್ಟ್ ಮಾಡುವ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನೂ ಅಪ್ ಡೇಟ್ ಮಾಡಲಾಗಿದೆ.

ಕನ್ನಡದಲ್ಲಿ ಮುಂಚೆಯೂ ಟ್ವೀಟ್ ಮಾಡಬಹುದಿತ್ತು. ಕನ್ನಡ ಅಷ್ಟೇ ಅಲ್ಲ, ಯಾವುದೇ ಭಾಷೆಯ ಯೂನಿಕೋಡ್ ಲಿಪಿಯಲ್ಲಿ ಟ್ವೀಟ್ ಮಾಡಬಹುದು. ಆದರೆ, ಯೂಸರ್ ಇಂಟರ್'ಫೇಸ್ ಮಾತ್ರ ಇಂಗ್ಲೀಷ್ ಸೇರಿದಂತೆ ಕೆಲವೇ ಭಾಷೆಗಳಿಗೆ ಸೀಮಿತವಾಗಿತ್ತು. ಕಾಲಾನುಕ್ರಮದಲ್ಲಿ ಹೊಸ ಹೊಸ ಭಾಷೆಗಳನ್ನು ಸೇರಿಸಲಾಗಿದೆ. ಈಗ ಹೊಸದಾಗಿ ಸೇರ್ಪಡೆಯಾಗಿದ್ದು ಸೇರಿದಂತೆ ಒಟ್ಟು ಆರೇಳು ಭಾಷೆಗಳಲ್ಲಿ ಟ್ವಿಟ್ಟರ್ ನ ಯೂಸರ್ ಇಂಟರ್ಫೇಸ್ ಸಿದ್ಧವಾಗಿದೆ. ಭಾರತೀಯ ಭಾಷೆಗಳ ಪೈಕಿ ಕನ್ನಡ, ಮರಾಠಿ, ಉರ್ದು, ಹಿಂದಿ, ಬಂಗಾಳಿ, ಗುಜರಾತಿ, ತಮಿಳು ಭಾಷೆಗಳಲ್ಲಿ ಟ್ವಿಟ್ಟರ್ ಲಭ್ಯವಿದೆ.

ನಿಮ್ಮ ಟ್ವಿಟ್ಟರ್ ಖಾತೆಯನ್ನು ಕನ್ನಡ ಭಾಷೆಗೆ ಅಳವಡಿಸಬೇಕೆಂದರೆ, ಮೊದಲು ನೀವು ನಿಮ್ಮ ಪ್ರೊಫೈಲ್ ಪೇಜ್ ಓಪನ್ ಮಾಡಿ. ಅಲ್ಲಿ ಅಕೌಂಟ್ ಸೆಟ್ಟಿಂಗ್ ಮಾಡುವ ಟ್ಯಾಬ್ ಕ್ಲಿಕ್ ಮಾಡಿ. ಮೂರನೇ ಕ್ರಮದಲ್ಲಿ ನಿಮಗೆ ಭಾಷೆಯನ್ನು ಬದಲಿಸುವ ಅವಕಾಶ ಇರುವ ಡ್ರಾಪ್ ಡೌನ್ ಮೆನು ಇರುತ್ತದೆ. ಅದರಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ ಸೇವ್ ಮಾಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com