ಟಚ್ ಸ್ಕ್ರೀನ್ ಬಟ್ಟೆ ತಯಾರಿಸಲು ಮುಂದಾದ ಗೂಗಲ್!

ತಂತ್ರಜ್ಞಾನ ಕ್ಷೇತ್ರದ ದೈತ್ಯ ಗೂಗಲ್ ಸಂಸ್ಥೆ ಬಟ್ಟೆಗಳಲ್ಲೂ ಟಚ್ ಸ್ಕ್ರೀನ್ ತಂತ್ರಜ್ಞಾನ ಅಳವಡಿಸಲು ಯೋಜನೆ ರೂಪಿಸಿದೆ.
ಟಚ್ ಸ್ಕ್ರೀನ್ ಬಟ್ಟೆ ತಯಾರಿಸಲು ಮುಂದಾದ ಗೂಗಲ್!

ತಂತ್ರಜ್ಞಾನ ಕ್ಷೇತ್ರದ ದೈತ್ಯ ಗೂಗಲ್ ಸಂಸ್ಥೆ  ಬಟ್ಟೆಗಳಲ್ಲೂ ಟಚ್ ಸ್ಕ್ರೀನ್ ತಂತ್ರಜ್ಞಾನ ಅಳವಡಿಸಲು ಯೋಜನೆ ರೂಪಿಸಿದೆ.

ವಾಹಕ ನೂಲುಗಳನ್ನು ತಯಾರಿಸಿ ಹೆಣೆಯುವ ಮೂಲಕ ಧರಿಸುವ ಬಟ್ಟೆಗಳಲ್ಲೂ ಟಚ್  ಸ್ಕ್ರೀನ್ ಮೆರಗು ಮೂಡಲಿದೆ. ಗೂಗಲ್ ನ ಆಧುನಿಕ ತಂತ್ರಜ್ಞಾನ ಮತ್ತು ಯೋಜನೆ(ಎ.ಟಿ.ಎ.ಪಿ) ಪ್ರಯೋಗಾಲಯದಲ್ಲಿ 'ಸ್ಮಾರ್ಟ್' ನೂಲನ್ನು ತಯಾರಿಸಲಾಗುತ್ತಿದ್ದು ಉಡುಪುಗಳಲ್ಲಿ ಟಚ್ ಸ್ಕ್ರೀನ್ ಸೌಲಭ್ಯ ದೊರೆಯಲಿದೆ.

ಮಿಶ್ರಲೋಹಗಳ ಮೂಲಕ ಸ್ಪರ್ಶ ಸಂವೇದನಾ ನೂಲು ತಯಾರಾಗಲಿದ್ದು ಕಾಟನ್ ಅಥವಾ ರೇಷ್ಮೆಯ ನೂಲಿನೊಂದಿಗೆ ಇದನ್ನೂ ಸಹ ಸೇರಿಸಲಾಗುತ್ತದೆ ಎಂದು ಗೂಗಲ್ ತನ್ನ ನೂತನೆ ಯೋಜನೆಯ ಕುರಿತಾದ ವೆಬ್ ಸೈಟ್ ನಲ್ಲಿ ತಿಳಿಸಿದೆ. ಸಂವಾದಾತ್ಮಕ ಸರ್ಫೇಸ್ ಗಳನ್ನು ನಿರ್ಮಿಸಲು ಸೆನ್ಸರ್ ಗ್ರಿಡ್ ಗಳೂ ಅಳವಡಿಕೆಯಾಗಲಿದ್ದು,  ಸ್ಪರ್ಶ ಸಂವೇದನಾ ನೂಲನ್ನು ಸಣ್ಣ ಸರ್ಕ್ಯೂಟ್ ನೊಂದಿಗೆ ಜೋಡಿಸಲು  ನವೀನ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಈ ಸರ್ಕ್ಯೂಟ್ ಗಳು ಒಂದು ಜಾಕೆಟ್ ನ ಗುಂಡಿಯಷ್ಟೇ ಗಾತ್ರ ಹೊಂದಿರಲಿದೆ ಎಂದು ಗೂಗಲ್ ತಿಳಿಸಿದೆ. ಸ್ಪರ್ಷ ಸಂವೇದಿ ನೂಲು ಗೆಸ್ಚರ್ ಡೇಟಾ ವನ್ನು  ಮೊಬೈಲ್ ಗೆ ರವಾನೆ ಮಾಡಲಿದ್ದು, ಬಳಕೆದಾರರಿಗೆ ಆನ್ ಲೈನ್, ಆಪ್ ಸೇವೆಗಳ ಸಂಪರ್ಕ ಕಲ್ಪಿಸಲಿದೆ.  ಅಲ್ಲದೇ  ಸ್ವೈಪ್ ಮಾಡಿದರೆ ಕಲರ್ ಸೆಟ್ಟಿಂಗ್ ಸೌಲಭ್ಯ ಸಹ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com