ಗುರು ಗ್ರಹದ ಉಪಗ್ರಹದಲ್ಲಿ ನೀರನ್ನು ಹುಡುಕಲು ಸಿದ್ಧರಾದ ನಾಸಾ ವಿಜ್ಞಾನಿಗಳು!

ಗುರು ಗ್ರಹದ ಉಪಗ್ರಹದಲ್ಲಿ ನೀರಿರುವ ಬಗ್ಗೆ ಸಂಶೋಧನೆ ನಡೆಸಲು ನಾಸಾ ವಿಜ್ಞಾನಿಗಳ ಮುಂದಾಗಿದ್ದಾರೆ.
ಗುರು ಗ್ರಹದ ಉಪಗ್ರಹ ಯುರೋಪಾ
ಗುರು ಗ್ರಹದ ಉಪಗ್ರಹ ಯುರೋಪಾ

ವಾಷಿಂಗ್ ಟನ್: ಮಂಗಳ ಗ್ರಹದಲ್ಲಿ ಜೀವಿಸಲು ಬೇಕಾದ ಅಂಶಗಳ ಶೋಧನೆ ನಡೆಯುತ್ತಿರುವಾಗಲೇ ನಾಸಾ ವಿಜ್ಞಾನಿಗಳ ಕಣ್ಣು ಗುರು ಗ್ರಹದ ಚಂದ್ರ ಯುರೋಪಾದ ಮೇಲೆ ಬಿದ್ದಿದ್ದು, ಗುರು ಗ್ರಹದ ಉಪಗ್ರಹದಲ್ಲಿ ನೀರಿರುವ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿದ್ದಾರೆ.

ಯುರೋಪಾದ ಬಗ್ಗೆ ಸಂಪೂರ್ಣ ಸಮೀಕ್ಷೆ ನಡೆಸಿ ವಾಸಯೋಗ್ಯವಾಗಿರುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸುವ ಮೊದಲ ಹಂತ ಯಶಸ್ವಿಯಾಗಿದ್ದು,ಈಗ ಯುರೋಪಾದಲ್ಲಿ ಎರಡನೇ ಹಂತದ ಸಂಶೋಧನಾ ಕಾರ್ಯಾಚರಣೆ ಪ್ರಾರಂಭವಾಗಲಿದೆ.     

ಸೌರಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿ ಜೀವಿಸಲು ಸಾಧ್ಯವಿರುವ ಗ್ರಹಗಳ ಶೋಧನೆ ನಡೆಯುತ್ತಿದ್ದು ಮಂಗಳ ಗ್ರಹ ಜೊತೆಗೆ ಗುರು ಗ್ರಹದ ಉಪಗ್ರಹ ಯುರೋಪಾದ ಮೇಲೂ ಸಂಶೋಧನೆ ನಡೆಯುತ್ತಿದೆ. ಕಳೆದ 2 ದಶಕಗಳಲ್ಲಿ ನಡೆದಿರುವ ಸಂಶೋಧನೆಯಲ್ಲಿ ಯುರೋಪಾದಲ್ಲಿ ಜೀವಿಸಲು ಸಾಧ್ಯವಿರುವ ಅಂಶಗಳ ಸುಳಿವು ದೊರೆತಿದ್ದು, ಇದಕ್ಕೆ ಉತ್ತರ ಕಂಡುಕೊಳ್ಳುವ ಸಮಯ ಬಂದಿದೆ ಎಂದು ನಾಸಾ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಈ ಸಂಶೋಧನೆಗಾಗಿ 2020 ರ ವೇಳೆಗೆ ಗುರುಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವುದಾಗಿ ನಾಸಾ ತಿಳಿಸಿದೆ.  ಭೂಮಿಯ ಉಪಗ್ರಹ ಚಂದ್ರನ ಗಾತ್ರದಷ್ಟೇ ಇರುವ ಯುರೋಪಾದಲ್ಲಿ ಹೆಪ್ಪುಗಟ್ಟಿದ ಹೊರಪದರದಲ್ಲಿ ಕೆಳಗೆ ಸಮುದ್ರ ಇದೆ ಎಂಬ ಅಂಶ 1990 ರಲ್ಲಿ ಬಹಿರಂಗವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com