ಗೂಗಲ್ ಸರ್ಚ್ ರಿಸಲ್ಟ್ ನಿಂದ 'ರಿವೆಂಜ್ ಪೋರ್ನ್' ಹೊರಕ್ಕೆ!

ರಿವೆಂಜ್ ಪೋರ್ನ್ ನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಿಂದ ತೆಗೆದು ಹಾಕಲು ಪ್ರಾರಂಭಿಸಿದೆ.
ಗೂಗಲ್ ಸರ್ಚ್ ರಿಸಲ್ಟ್ ನಿಂದ 'ರಿವೆಂಜ್  ಪೋರ್ನ್' ಹೊರಕ್ಕೆ!

ವಾಷಿಂಗ್ ಟನ್: ರಿವೆಂಜ್ ಪೋರ್ನ್ ನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಿಂದ ತೆಗೆದು ಹಾಕಲು ಪ್ರಾರಂಭಿಸಿದೆ. ಇದರಿಂದಾಗಿ ಗೂಗಲ್ ಸೈಟ್ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದನ್ನು ನಿಯಂತ್ರಿಸಬಹುದಾಗಿದೆ.

ಇದನ್ನು ತೆಗೆದುಹಾಕುವುದಕ್ಕಾಗಿಯೇ ವೆಬ್ ಫಾರ್ಮ್ ನ್ನು ಪ್ರಾರಂಭಿಸಲಿರುವ ಗೂಗಲ್, ಅಶ್ಲೀಲ ಚಿತ್ರಗಳ ಪ್ರಕಟಣೆಗೆ ವಿರೋಧಿಸುವ ತನ್ನ ಬಳಕೆದಾರರ ಮನವಿಯನ್ನು ಸ್ವೀಕರಿಸಲಿದೆ.  ಗೂಗಲ್ ನ ಈ ಕ್ರಮದಿಂದಾಗಿ ರಿವೆಂಜ್ ಪೋರ್ನ್ ನಿಂದ ಉಂಟಾಗುತ್ತಿರುವ ಹಾನಿಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದಾಗಿದೆ.

ರಿವೆಂಜ್ ಪೋರ್ನ್ ಗೆ ಬಲಿಯಾದವರನ್ನು ಕೀಳಾಗಿ ತೋರಿಸಲು ರಿವೆಂಜ್ ಪೋರ್ನ್ ಶಬ್ದ ಗೂಗಲ್ ನಲ್ಲಿ ಬಳಕೆಯಾಗುತ್ತಿದ್ದು ಇದು ವೈಯಕ್ತಿಕ ಮತ್ತು ಭಾವನಾತ್ಮಕವಾಗಿ ಹಾನಿಕಾರಕವಾಗಲಿದೆ, ಅದ್ದರಿಂದ ಈ ಶಬ್ದವನ್ನು ತೆಗೆದುಹಾಕುತ್ತಿರುವುದಾಗಿ ಗೂಗಲ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ. ರಿವೆಂಜ್ ಪೋರ್ನ್ ಶಬ್ದಕ್ಕೆ ಸರ್ಚ್ ನೀಡಿದರೆ ಅಶ್ಲೀಲ ಚಿತ್ರಗಳು ಪ್ರಕಟವಾಗುತ್ತಿದ್ದ ಕಾರಣ ಗೂಗಲ್ ಈ ನಿರ್ಧಾರ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com