ಶನಿ ಗ್ರಹದ ಚಂದ್ರ 'ಟೈಟನ್' ಮೇಲೆ ಸರೋವರಗಳ ಪತ್ತೆ

ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಯೂರೂಪಿಯನ್ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ನಡೆಸಿದ ಕಾಸ್ಸಿನಿ ಮಿಶನ್ ಶನಿ ಗ್ರಹದ ಚಂದ್ರ ಟೈಟನ್
'ಟೈಟನ್' ಚಂದ್ರ  (ಚಿತ್ರ ಮೂಲ: ನಾಸಾ)
'ಟೈಟನ್' ಚಂದ್ರ (ಚಿತ್ರ ಮೂಲ: ನಾಸಾ)

ವಾಶಿಂಗ್ಟನ್: ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಯೂರೂಪಿಯನ್ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ನಡೆಸಿದ ಕಾಸ್ಸಿನಿ ಮಿಶನ್ ಶನಿ ಗ್ರಹದ ಚಂದ್ರ ಟೈಟನ್ ಮೇಲೆ ಭೂಮಿಯ ಮೇಲಿರುವಂತೆಯೇ ಹಳ್ಳಕೊಳ್ಳಗಳಿರುವುದನ್ನು ಸೂಚಿಸುತ್ತದೆ ಎಂದು ತಿಳಿಯಲಾಗಿದೆ.

ಭೂಮಿಯನ್ನು ಹೊರತುಪಡಿಸಿದರೆ ಸರೋವರಗಳು, ನದಿಗಳು ಮತ್ತು ಸಮುದ್ರಗಳಿರುವಂತಹ ಮೇಲ್ಮೈ ಇರುವುದು ಟೈಟಾನ್ ಮೇಲೆ ಮಾತ್ರ. ಇದನ್ನು ಕ್ಯಾಸ್ಸಿನಿ ಬಾಹ್ಯಾಕಾಶ ನೌಕೆ ಪತ್ತೆಹಚ್ಚಿದೆ.

ಈ ಚಂದ್ರನ ಮೇಲ್ಮಟ್ಟದ ಭೂರಚನೆಗೆ ಸುಣ್ಣ ಮತ್ತು ಜಿಪ್ಸಮ್ ನಂತಹ ಕರಗಬಲ್ಲ ಕಲ್ಲುಗಳು ಮತ್ತು ಅಂತರ್ಜಲ ಹಾಗು ಮಳೆ ಕಾರಣ ಎನ್ನುತ್ತಾರೆ ಸಂಶೋಧಕರು.

ಸಮಯ ಕಳೆದ ಹಾಗೆ ತಣ್ಣಗಿನ ವಾತಾವರಣದಲ್ಲಿ ಇದು ಹಳ್ಳ ಕೊಳ್ಳ ಮತ್ತು ಗುಹೆಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.

ಭೂಮಿ ಮತ್ತು ಟೈಟನ್ ಮೇಲಿನ ಭೂರಚನೆ ಬೇರೆಲ್ಲಾ ರೀತಿಯಲ್ಲೂ ವಿಭಿನ್ನವಾದರೂ ರಚನೆಯ ವಿಧಾನ ಒಂದೆ ಇರಬಹುದು ಎನ್ನುತ್ತಾರೆ ಸಂಶೋಧಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com