

ವಾಟ್ಸ್ ಆಪ್ ಸಂದೇಶ ಕಳಿಸುವ ಅತಿ ಜನಪ್ರಿಯ ಅಪ್ಲಿಕೇಶನ್ ಆಗಿದ್ದರೂ ಬಳಕೆದಾರರ ವಯಕ್ತಿಕ ಮಾಹಿತಿ ಗೌಪ್ಯತೆ ಕಾಪಾಡುವ ವಿಷಯದಲ್ಲಿ ಅಂತ್ಯಂತ ಕಳಪೆ ವ್ಯವಸ್ಥೆ ಹೊಂದಿದೆ ಎಂಬ ವಿಷಯ ಬಹಿರಂಗವಾಗಿದೆ.
ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಷನ್ ನ ಹೂ ಹ್ಯಾಸ್ ಯುವರ್ ಬ್ಯಾಕ್ ಎಂಬ ಇತ್ತೀಚಿನ ವರದಿ ಪ್ರಕಾರ, ಪ್ರತಿ ಹಂತದಲ್ಲೂ ಬಳಕೆದಾರರ ವಯಕ್ತಿಕ ಮಾಹಿತಿ ಗೌಪ್ಯತೆ ಕಾಪಾಡುವಲ್ಲಿ ವಾಟ್ಸ್ ಆಪ್ ವಿಫಲವಾಗಿದೆ ಎಂದು ತಿಳಿದುಬಂದಿದೆ. ವಾಟ್ಸ್ ಆಪ್ ನ ಸಹ ಸಂಸ್ಥೆ ಫೇಸ್ ಬುಕ್ ಬಳಕೆದಾರರ ಮಾಹಿತಿ ಗೌಪ್ಯತೆ ಕಾಪಾಡುವ ಮಾನದಂಡಗಳಿಗೆ ಅನುಮೋದನೆ ಪಡೆದಿದೆ.
ಹೂ ಹ್ಯಾಸ್ ಯುವರ್ ಬ್ಯಾಕ್ ವರದಿ 2011 ರಿಂದಲೂ ಪ್ರಕಟವಾಗುತ್ತಿದ್ದು ಇದೇ ಮೊದಲ ಬಾರಿಗೆ ವಾಟ್ಸ್ ಆಪ್ ನ್ನು ಪಟ್ಟಿಗೆ ಸೇರಿಸಲಾಗಿದೆ. ಮಾಹಿತಿ ಗೌಪ್ಯತೆಯನ್ನು ಕಾಪಾಡುವಂತೆ ಸೂಚನೆ ನೀಡಿದರೂ ವಾಟ್ಸ್ ಆಪ್ ಅದನ್ನು ಅಳವಡಿಸಿಕೊಂಡಿಲ್ಲ ಎಂದು ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಷನ್ ಹೇಳಿದೆ.
ಗೌಪ್ಯತೆ ಸುರಕ್ಷತಾ ಶ್ರೇಣಿಯನ್ನು ನಿರ್ಧರಿಸುವ ಮಾನದಂಡಗಳೇನು?
ಮಾಹಿತಿ ಗೌಪ್ಯತೆ ಕಾಪಾಡುವ ಬಗ್ಗೆ ಕೈಗೊಂಡಿರುವ ಕ್ರಮ
ಸರ್ಕಾರ ತಮ್ಮ ಬಗ್ಗೆ ಮಾಹಿತಿ ಕೇಳಿದಾಗ ಅದರ ಬಗ್ಗೆ ಬಳಕೆದಾರರಿಗೆ ತಿಳಿಸುವುದು
ನಿಯಮಗಳ ಪಾರದರ್ಶಕತೆ
ಯಾವುದೇ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಿದರು ಅದನ್ನು ಮತ್ತೆ ಬಹಿರಂಗಪಡಿಸುವುದು
ತಮ್ಮ ಮಾಹಿತಿಯನ್ನು ಪಡೆಯಲು ಸರ್ಕಾರಕ್ಕೆ ಅನುಕೂಲಕರ ವ್ಯವಸ್ಥೆ ಕಲ್ಪಿಸುವುದು
Advertisement