ಶೀಘ್ರದಲ್ಲೇ `ಡಿಜಿಟಲ್ ಲಾಕರ್'ನಲ್ಲಿ ದಾಖಲೆ ಭದ್ರ

ಇನ್ನು ಮುಂದೆ ಪ್ರಮುಖ ದಾಖಲೆ ಪತ್ರ ಕಳೆದುಕೊಳ್ಳುವ ಭೀತಿ ನಿಮಗಿರುವುದಿಲ್ಲ. ಏಕೆಂದರೆ, ನಿಮ್ಮ ದಾಖಲೆಗಳೆಲ್ಲ `ಡಿಜಿಟಲ್ ಲಾಕರ್'ನಲ್ಲಿ ಭದ್ರವಾಗಿರಲಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇನ್ನು ಮುಂದೆ ಪ್ರಮುಖ ದಾಖಲೆ ಪತ್ರ ಕಳೆದುಕೊಳ್ಳುವ ಭೀತಿ ನಿಮಗಿರುವುದಿಲ್ಲ. ಏಕೆಂದರೆ, ನಿಮ್ಮ ದಾಖಲೆಗಳೆಲ್ಲ `ಡಿಜಿಟಲ್ ಲಾಕರ್'ನಲ್ಲಿ ಭದ್ರವಾಗಿರಲಿದೆ. ಕಾಗದರಹಿತ ಆಡಳಿತದತ್ತ ಭಾರತವು ಹೆಜ್ಜೆಯಿಟ್ಟಿದ್ದು, ಶೀಘ್ರದಲ್ಲಿಯೇ ನೀವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ `ಡಿಜಿಟಲ್ ಲಾಕರ್' ಸೌಲಭ್ಯ ಪಡೆಯಬಹುದಾಗಿದೆ.

`ಡಿಜಿಟಲ್ ಭಾರತ'ದ ಅಂಗವಾಗಿರುವ ಡಿಜಿಟಲ್ ಲಾಕರ್ ಸೌಲಭ್ಯಕ್ಕೆ ಜುಲೈ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈ ಸೌಲಭ್ಯ ಜಾರಿಯಾದರೆ, ನಾಗರಿಕರು ತಮ್ಮೆಲ್ಲ ದಾಖಲೆಗಳನ್ನು ಡಿಜಿಟಲ್ ಲಾಕರ್ ನಲ್ಲಿ ಸಂರಕ್ಷಿಸಿಡಬಹುದಾಗಿದೆ. ದಾಖಲೆಗಳನ್ನು ಡಿಜಿಟಲ್ ಲಾಕರ್‍ನಲ್ಲಿ ರಕ್ಷಿಸಿಡಬಹುದಾಗಿದೆ.

ಏನಿದು ಡಿಜಿಟಲ್ ಲಾಕರ್?
ಪ್ರಮುಖ ದಾಖಲೆಗಳ ಡಿಜಿಟಲ್ ಪ್ರತಿಗಳನ್ನು ಆನ್‍ಲೈನ್‍ನಲ್ಲಿ ಸಂರಕ್ಷಿಸಿಡುವ ಸೌಲಭ್ಯವಿದು. ಡಿಜಿಟಲ್ ಲಾಕರ್‍ನಲ್ಲಿ ಒಮ್ಮೆ ನೋಂದಣಿ ಮಾಡಿಕೊಂಡರೆ, ನಾಗರಿಕರು ತಮ್ಮ ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಅಂಕಪಟ್ಟಿ ಮತ್ತಿತರ ಮಹತ್ವದ ದಾಖಲೆಗಳನ್ನು
ಅದರಲ್ಲಿಟ್ಟುಕೊಳ್ಳಬಹುದು. ಆದರೆ, ಇದಕ್ಕೆ ಆಧಾರ್ ಸಂಖ್ಯೆ ಹಾಗೂ ಆಧಾರ್ ಲಿಂಕ್ ಹೊಂದಿರುವ ಮೊಬೈಲ್ ಸಂಖ್ಯೆ ಬೇಕು.

ನೋಂದಣಿ ಎಲ್ಲಿ?

  • ಎಲ್ಲ ಸಾಮಾನ್ಯ ಸೇವಾ ಕೇಂದ್ರ(ಸಿಎಸ್‍ಸಿ)ಗಳಲ್ಲೂ ಡಿಜಿಟಲ್ ಲಾಕರ್ ಅನ್ನು ಆ್ಯಕ್ಟಿವೇಟ್ ಮಾಡಬಹುದು.
  •  digitallocker.gov.in ಅಥವಾ digilocker.gov.in ನಲ್ಲೂ ನೋಂದಣಿ ಮಾಡಿಕೊಳ್ಳಬಹುದು
ಲಾಕರ್ ತೆರೆಯುವುದು ಹೇಗೆ?
  • ƒಡಿಜಿಟಲ್ ಲಾಕರ್‍ಗೆ ಸೈನ್ ಅಪ್ ಆಗಬೇಕೆಂದರೆ ನಿಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ಸಂಪರ್ಕಿತ ಮೊಬೈಲ್ ಸಂಖ್ಯೆ ಅಗತ್ಯ
  • ƒಲಾಗ್ ಇನ್ ಆಗಬೇಕೆಂದರೆ, ಮೊದಲಿಗೆ ಲಾಗ್-ಇನ್ ಕ್ಷೇತ್ರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ƒಆಗ ನಿಮ್ಮ ಮೊಬೈಲ್‍ಗೆ ಒನ್ ಟೈಮ್ ಪಾಸ್‍ವರ್ಡ್(ಒಟಿಪಿ) ರವಾನೆಯಾಗುತ್ತದೆ.
  • ƒಒಟಿಪಿ ಎಂದಿರುವಲ್ಲಿ ಈ ಒನ್ ಟೈಮ್ ಪಾಸ್‍ವರ್ಡ್ ಅನ್ನು ನಮೂದಿಸಿ. ಆಗ ನಿಮ್ಮ ಖಾತೆ ತೆರೆಯುತ್ತದೆ.
  • ƒಒಮ್ಮೆ ಇದನ್ನು ತೆರೆದ ಬಳಿಕ, ಬಳಕೆದಾರರು ಡಿಜಿಟಲ್ ಲಾಕರ್‍ನಲ್ಲಿ ಅಪ್‍ಲೋಡ್ ಆದ ತಮ್ಮ ಇ-ದಾಖಲೆಗಳನ್ನು ನೋಡಬಹುದು.
  • ƒಇ-ದಾಖಲೆಗಳೊಂದಿಗೆ ಲಿಂಕ್ ಮಾಡುವ ಮೂಲಕ ತಮ್ಮ ಖಾಸಗಿ ದಾಖಲೆಗಳನ್ನು ಕೂಡ ಬೇಕಿದ್ದವರಿಗೆ ಕಳುಹಿಸಬಹುದು.
ಲಾಕರ್ ತೆರೆಯುವುದು ಹೇಗೆ? ಪ್ರಯೋಜನವೇನು?
  • ƒನಾಗರಿಕರು ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ಅಂಕಪಟ್ಟಿ, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್ ಇತ್ಯಾದಿ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿಡಬಹುದು.
  • ƒದಾಖಲೆ ಕಳೆದುಹೋಗುವ, ಹಾನಿಗೊಳಗಾಗುವ ಭೀತಿ ಇರುವುದಿಲ್ಲ.
  • ƒಎಲ್ಲ ದಾಖಲೆಗಳೂ ಬೇಕಾದಾಗ ಸಿಗುತ್ತವೆ, ಹೀಗಾಗಿ ಯಾವುದೇ ಸೇವೆಯನ್ನು ಸುಲಭವಾಗಿ ಪಡೆಯಬಹುದು.
  • ƒಇ- ದಾಖಲೆಗಳ ಡಿಜಿಟಲ್ ಸಹಿ ಸೌಲಭ್ಯವನ್ನೂ ಪಡೆಯಬಹುದು.
  • ƒಸರ್ಕಾರದ ಇಲಾಖೆಗಳು, ಸಂಸ್ಥೆಗಳಿಗೆ ಕಾಗದಪತ್ರಗಳ ಸಂಗ್ರಹದ ಹೊರೆ ಕಡಿಮೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com