ಕಾಮನ ಬಿಲ್ಲಿನ ರಂಗಲ್ಲಿ ರಂಗಾದ ಫೇಸ್‌ಬುಕ್ ಪ್ರೊಫೈಲ್ ಚಿತ್ರ!

ಸಲಿಂಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸಿ ಅಮೆರಿಕದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಫೇಸ್‌ಬುಕ್
ಫೇಸ್ಬುಕ್ ನಲ್ಲಿ ಜೂಕರ್ ಬರ್ಗ್, ಅಮೆರಿಕನ್ ನಟ ಲಿಯೋನಾರ್ಡೋ ಡಿ ಕಾಪ್ರಿಯೋ ಮತ್ತು ಶ್ವೇತಭವನದ ಪ್ರೊಫೈಲ್ ಫೋಟೋ
ಫೇಸ್ಬುಕ್ ನಲ್ಲಿ ಜೂಕರ್ ಬರ್ಗ್, ಅಮೆರಿಕನ್ ನಟ ಲಿಯೋನಾರ್ಡೋ ಡಿ ಕಾಪ್ರಿಯೋ ಮತ್ತು ಶ್ವೇತಭವನದ ಪ್ರೊಫೈಲ್ ಫೋಟೋ

ಇವತ್ತು ಫೇಸ್‌ಬುಕ್‌ನಲ್ಲಿ ಬಳಕೆದಾರರ ಪ್ರೊಫೈಲ್ ಫೋಟೋಗಳೆಲ್ಲವೂ ಕಾಮನ ಬಿಲ್ಲಿನ ರಂಗಲ್ಲಿ ರಂಗು ರಂಗಾಗಿರುವುದನ್ನು ನೀವು ಕಾಣಬಹುದು. ಎಲ್ಲರ ಪ್ರೊಫೈಲ್ ಫೋಟೋಗಳನ್ನು ಬಣ್ಣ ಬಣ್ಣದಿಂದ ಕಂಗೊಳಿಸುವಂತೆ ಮಾಡಿದ್ದು ಫೇಸ್‌ಬುಕ್. ಅದೂ ಸುಮ್ಮನೆ ಏನೂ  ಅಲ್ಲ, ಅದಕ್ಕೂ ಕಾರಣವಿದೆ.

ಸಲಿಂಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸಿ ಅಮೆರಿಕದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಫೇಸ್‌ಬುಕ್  ಸಂಭ್ರಮ ಆಚರಿಸುತ್ತದೆ. ಆ ತೀರ್ಪನ್ನು ಬೆಂಬಲಿಸುವ ಜನರು facebook.com/celebratepride  ಎಂಬ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅವರವರ ಪ್ರೊಫೈಲ್ ಚಿತ್ರದ ಮೇಲೆ ಕಾಮನ ಬಿಲ್ಲಿನ ಬಣ್ಣ ಬಂದು ಬಿಡುತ್ತದೆ. ಈ ರೀತಿ ಕಾಮನ ಬಿಲ್ಲಿನ ಬಣ್ಣ ಹೊಂದಿರುವ ಪ್ರೊಫೈಲ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಫೇಸ್‌ಬುಕ್ ಬಳಕೆದಾರನ್ನು ಈ ತೀರ್ಪನ್ನು ಸ್ವಾಗತಿಸಬಹುದಾಗಿದೆ. ಸಲಿಂಗಿಗಳೂ ನಮ್ಮಂತೆಯೇ ಸಮಾಜದಲ್ಲಿ ಬದುಕುವ ಅವಕಾಶ ಹೊಂದಿರುತ್ತಾರೆ. ಅವರಿಗೆ ಬೆಂಬಲ ಸೂಚಿಸುವ ಮತ್ತು ಅಮೆರಿಕದ ನ್ಯಾಯಾಲಯದ ತೀರ್ಪನ್ನು ಬೆಂಬಲಿಸಿ ಫೇಸ್‌ಬುಕ್ Celebrate Pride ಎಂಬ ಟೂಲ್  ಮೂಲಕ ಫೇಸ್ ಬುಕ್ ಬಳಕೆದಾರರಿಗೆ ತೀರ್ಪನ್ನು ಸ್ವಾಗತಿಸುವ ಆಯ್ಕೆಯನ್ನು ನೀಡಿದೆ.

ಅಮೆರಿಕದ ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಅಮೆರಿಕದ ಶ್ವೇತಭವನದ ಫೇಸ್‌ಬುಕ್ ಪ್ರೊಫೈಲ್ ಫೋಟೋ ಕೂಡಾ ಕಾಮನಬಿಲ್ಲಿನ ರಂಗಿಗೆ ಬದಲಾಗಿ ಬಿಟ್ಟಿತು.

ಫೇಸ್‌ಬುಕ್ ಸಿಇಒ ಮಾರ್ಕ್ ಜೂಕರ್‌ಬರ್ಗ್ ಕಾಮನಬಿಲ್ಲಿನ ಬಣ್ಣ ಹೊಂದಿರುವ ಪ್ರೊಫೈಲ್ ಫೋಟೋ ಹಾಕಿದರೆ, ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಮೊದಲಾದವರು ಸಲಿಂಗ ವಿವಾಹವನ್ನು ನ್ಯಾಯಬದ್ಧವಾಗಿಸಿದ ತೀರ್ಪಿಗೆ ಟ್ವಿಟರ್‌ನಲ್ಲಿ ಬೆಂಬಲ ಸೂಚಿಸಿದ್ದಾರೆ.

ನೀವೂ ಈ ತೀರ್ಪನ್ನು ಸ್ವಾಗತಿಸುವುದಾದರೆ  facebook.com/celebratepride ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಾಮನಬಿಲ್ಲಿನ ಬಣ್ಣದ ಪ್ರೊಫೈಲ್ ಫೋಟೋಗಳನ್ನು ಪೋಸ್ಟ್ ಮಾಡಬಹುದು.

ಅದೇ ವೇಳೆ ಟ್ವಿಟರ್ ನಲ್ಲಿ  #LoveWins ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದರೆ ಕಾಮನಬಿಲ್ಲಿನ ಬಣ್ಣದ ಪುಟ್ಟ ಹೃದಯದ ಚಿತ್ರ ಡಿಸ್ ಪ್ಲೇ ಆಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com