ಮೂರ್ನಾಲ್ಕು ಪ್ರದೇಶದಲ್ಲಿ ಕಂಡುಬಂದ ಬೆಂಕಿಯುಂಡೆಯ ದೃಶ್ಯ
ವಿಜ್ಞಾನ-ತಂತ್ರಜ್ಞಾನ
ರಾತ್ರಿ ಬೆಂಕಿ ಉಂಡೆ, ಬೆಳಗ್ಗೆ ಗುಂಡಿ: ಇದು ಉಲ್ಕಾಪಾತವೇ?
ರಾತ್ರಿ ನೋಡಿದ ಬೆಂಕಿ ಉಂಡೆ ಬೆಳಗ್ಗೆ ಗುಂಡಿ ಉಂಟುಮಾಡಿತ್ತಂತೆ! ಏನೆಂದು ಅರ್ಥವಾಗಿಲ್ಲವೇ?...
ಎರ್ನಾಕುಲಂ: ರಾತ್ರಿ ನೋಡಿದ ಬೆಂಕಿ ಉಂಡೆ ಬೆಳಗ್ಗೆ ಗುಂಡಿ ಉಂಟುಮಾಡಿತ್ತಂತೆ! ಏನೆಂದು ಅರ್ಥವಾಗಿಲ್ಲವೇ?...
ಇದು ಕೇರಳದಲ್ಲಿ ನಡೆದ ಘಟನೆ. ಶುಕ್ರವಾರ ರಾತ್ರಿ ಕೇರಳದ ಕರಿಮಲ್ಲೂರು ಗ್ರಾಮದ ಜನತೆಗೆ ಆಗಸದಲ್ಲಿ ಬೃಹತ್ ಬೆಂಕಿಯುಂಡೆಯೊಂದು ಕಂಡುಬಂದಿತ್ತು. ಮೂರ್ನಾಲ್ಕು ಪ್ರದೇಶಗಳಲ್ಲಿ ಈ ದೃಶ್ಯ ಕಂಡುಬಂದಿದ್ದು, ಬೆಂಕಿಯುಂಡೆ ಹಾದುಹೋದಾಗ ಭಾರಿ ಶಬ್ಧ ಹಾಗೂ ಭೂಕಂಪದ ಅನುಭವ ಆಗಿತ್ತು.
ಬೆಳಗ್ಗೆ ಎದ್ದು ನೋಡುವಾಗ ಎರ್ನಾಕುಲಂ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ದೊಡ್ಡದಾದ ಗುಂಡಿಗಳು ಬಿದ್ದಿದ್ದವು. ಇದು ರಾತ್ರಿ ಕಂಡ ಬೆಂಕಿಯುಂಡೆಯ ಪ್ರಭಾವ ಎನ್ನುವುದು ಸ್ಥಳೀಯರ ವಾದ. ವಿಪತ್ತು ನಿರ್ವಹಣಾ ಪಡೆಯ ಅಧಇಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಉಲ್ಕಾಪಾತದಿಂದ ಗುಂಡಿ ಉಂಟಾಗಿರಬ ಹುದು ಎಂದು ಅಂದಾಜಿಸಿದ್ದಾರೆ. ಜತೆಗೆ, ಅಲ್ಲಿ ಸಿಕ್ಕಿದ ಸ್ಯಾಂಪಲ್ಗಳನ್ನು ಭಾರತೀಯ ಭೂಗರ್ಭ ಇಲಾಖೆಗೆ ಕಳುಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ