ಭಾರತಕ್ಕೆ ಬಂದಿಳಿದ ಸೌರವಿಮಾನ

ಇಂಧನ ಬಳಸದೇ ಕೇವಲ ಸೌರ ಶಕ್ತಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಜರ್ಲೆಂಡ್‌ ನ "ಸೋಲಾರ್‌ ಇಂಪಲ್ಸ್‌' ವಿಮಾನವು...
ಸೌರವಿಮಾನ
ಸೌರವಿಮಾನ

ಅಹಮದಾಬಾದ್‌: ಇಂಧನ ಬಳಸದೇ ಕೇವಲ ಸೌರ ಶಕ್ತಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಜರ್ಲೆಂಡ್‌ ನ "ಸೋಲಾರ್‌ ಇಂಪಲ್ಸ್‌' ವಿಮಾನವು ಮಂಗಳವಾರ ರಾತ್ರಿ ಗುಜರಾತಿನ ಅಹಮದಾಬಾದ್‌ಗೆ ಬಂದಿಳಿಯಿತು.

ಸೋಲಾರ್ ಶಕ್ತಿಯಿಂದ ಬಾನಂಗಳಕ್ಕೆ ನೆಗೆಯಬಲ್ಲ ಈ ‘ಸೊಲಾರ್ ವಿಮಾನ’ ಅರಬ್ ನ ಅಬುದಾಬಿಯಿಂದ ಹೊರಟು,400 ಕಿ.ಮೀ. ಕ್ರಮಿಸಿ ಮಂಗಳವಾರ ಮುಂಜಾನೆ ಓಮನ್‌ ರಾಜಧಾನಿ ಮಸ್ಕಟ್‌ಗೆ ಬಂದಿಳಿದಿತ್ತು. ನಂತರ ಭಾರತದತ್ತ ಪ್ರಯಾಣ ಬೆಳೆಸಿದ್ದ, ರಾತ್ರಿ 9 ಗಂಟೆಯ ಸುಮಾರಿನಲ್ಲಿ ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ವಿಮಾನ 1465 ಕಿ.ಮೀ. ದೂರವನ್ನು 14 ತಾಸಿನಲ್ಲಿ ಪೂರೈಸಿ ನಿರೀಕ್ಷೆಗಿಂತ 2 ತಾಸು ಮುನ್ನ ಭಾರತಕ್ಕೆ ಆಗಮಿಸಿದೆ. ಸೌರಶಕ್ತಿ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಮಾನವು, ವಿಶ್ವಪರ್ಯಟನೆಗೆ ಹೊರಟಿದೆ.
ಸ್ವಿಟ್ಜರ್ಲೆಂಡ್‌ನ `ಸೋಲಾರ್ ಇಂಪಲ್ಸ್'  ಕಂಪೆನಿ  ಈ ವಿಮಾನ ರೂಪಿಸಿದ್ದು, ಸ್ವಚ್ಛ ತಂತ್ರಜ್ಞಾನಗಳಲ್ಲಿರುವ (ಕ್ಲೀನ್ ಟೆಕ್ನಾಲಜಿ) ಅವಕಾಶಗಳನ್ನು ಜಗತ್ತಿನ ಮುಂದೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುವುದು ಈ ವಿಮಾನ ನಿರ್ಮಾಣದ ಪ್ರಮುಖ ಉದ್ದೇಶವಾಗಿದೆ.

ಜಗತ್ತನ್ನು ಸೌರ ವಿಮಾನದಲ್ಲಿ ಸುತ್ತುವುದು ಕಂಪೆನಿಯ ಮಹಾತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ 2ನೇ ಪೀಳಿಗೆಯ ಸೌರವಿಮಾನ ತಯಾರಾಗುತ್ತಿದೆ.
ಸೋಲಾರ್ ಶಕ್ತಿ ಬಳಕೆಯ ಈ ವಿಮಾನ ಒಂದು ಹನಿಯೂ ಇಂಧನ ಬಳಸದೆ ಸೌರ ಶಕ್ತಿಯಿಂದಲೇ ಹಗಲು ಮತ್ತು ರಾತ್ರಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. 72 ಮೀಟರ್ ಉದ್ದದ ರೆಕ್ಕೆ ಹೊಂದಿರುವ ಇದು ‘ಬೊಯಿಂಗ್-747’ ಅನ್ನು ಹೋಲುತ್ತದೆ. ವಿಮಾನದ ತೂಕ 2,300 ಕೆ.ಜಿ. ಇದ್ದು, ಒಂದು ಕಾರಿನ ತೂಕಕ್ಕೆ ಸಮನಾಗಿದೆ. ವಿಮಾದ ರೆಕ್ಕೆಗೆ ಅಳವಡಿಸಲಾಗಿರುವ 17,248 ಸೋಲಾರ್ ಕೋಶಗಳು ವಿಮಾನ ಚಾಲನೆಗೆ ಅಗತ್ಯ ಶಕ್ತಿಯನ್ನು ಪೂರೈಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com