
ಈಗ ವಾಟ್ಸ್ಆಪ್ ಬಳಕೆದಾರರಿಗೆ ಸಂತಸದ ಸುದ್ದಿ. ೨.೧೧.೫೨೮ ಅಥವಾ ೨.೧೧.೫೩೧ ವಾಟ್ಸ್ಆಪ್ ಅವತಾರವನ್ನು ನಿಮ್ಮ ಆಂಡ್ರಾಯ್ದ್ ಫೋನಿನ ಪ್ಲೇ ಸ್ಟೋರ್ ನಿಂದ ಇಳಿಸಿಕೊಂಡು ಹಾಕಿಕೊಂಡರೆ ವಾಟ್ಸ್ಆಪ್ ಮೂಲಕ ಈ ನೀವು ನಿಮ್ಮ ಗೆಳೆಯರಿಗೆ ಕರೆ ಮಾಡಬಹುದಾಗಿದೆ.
ಈಗ ನೀವು ಕರೆ ಮಾಡುವ ಗೆಳೆಯ-ಗೆಳತಿಯ ಫೋನಿನಲ್ಲಿ ವಾಟ್ಸ್ಆಪ್ ಇದ್ದು ಅವರು ವಾಯ್ಸ್ ಕಾಲ್ ಅನ್ನು ಆಕ್ಟಿವೇಟ್ ಮಾಡಿಕೊಂಡಿದ್ದಾರೆ ನೀವು ಉಚಿತವಾಗಿ ಇನ್ಮುಂದೆ ಅವರಿಗೆ ಕರೆ ಮಾಡಬಹುದು.
ವಾಟ್ಸ್ಆಪ್ ಸಂಸ್ಥೆಯನ್ನು ಫೇಸ್ ಬುಕ್ ಕೊಂಡುಕೊಂಡ ಮೇಲೆ ಇದರ ಬಳಕೆದಾರರಲ್ಲಿ ೧೫% ಏರಿಕೆ ಕಂಡಿದೆ. ಈಗ ವಾಟ್ಸ್ಆಪ್ ಬಳಕೆದಾರರ ಸಂಖ್ಯೆ ೫೦ ದಶಲಕ್ಷ ಜನ ಭಾರತದಲ್ಲೇ ಇದ್ದಾರೆ.
Advertisement