ಶುಕ್ರ ಗ್ರಹಕ್ಕೊಂದು ವಿಮಾನ

ಅಂತರಿಕ್ಷ ಇತಿಹಾಸದಲ್ಲಿ ಮತ್ತೊಂದು ಕ್ರಾಂತಿಗೆ ಅಮೆರಿಕ ಸಜ್ಜಾಗಿದ್ದು, ಅಮೆರಿಕದ ಏರೋಸ್ಪೇಸ್ ಕಂಪನಿಯೊಂದು ಶುಕ್ರಗ್ರಹಕ್ಕೆ ಪ್ರಯಾಣ ಮಾಡಬಲ್ಲ ಪ್ರೊಪೆಲ್ಲರ್ ವಿಮಾನದ ತಯಾರಿಕೆ ಆರಂಭಿಸಿದೆ...
ಶುಕ್ರಗ್ರಹ (ಸಂಗ್ರಹ ಚಿತ್ರ)
ಶುಕ್ರಗ್ರಹ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಅಂತರಿಕ್ಷ ಇತಿಹಾಸದಲ್ಲಿ ಮತ್ತೊಂದು ಕ್ರಾಂತಿಗೆ ಅಮೆರಿಕ ಸಜ್ಜಾಗಿದ್ದು, ಅಮೆರಿಕದ ಏರೋಸ್ಪೇಸ್ ಕಂಪನಿಯೊಂದು ಶುಕ್ರಗ್ರಹಕ್ಕೆ ಪ್ರಯಾಣ ಮಾಡಬಲ್ಲ ಪ್ರೊಪೆಲ್ಲರ್ ವಿಮಾನದ ತಯಾರಿಕೆ ಆರಂಭಿಸಿದೆ.

2021ರಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಈ ಮಹತ್ವಾಕಾಂಕ್ಷೆಯ  ಯೋಜನೆಯಂತೆ ವಿಮಾನವು ಶುಕ್ರಗ್ರಹದ ಆಗಸದಲ್ಲಿ ಹಾರಾಡಲಿದ್ದು, ಗ್ರಹದ ನೆಲವನ್ನು ಕೇವಲ 50 ಕಿಮೀ ಅಂತರದಿಂದ ವೀಕ್ಷಿಸಲಿದೆ. ಈ ಕನಸಿನ ಯೋಜನೆಗಾಗಿ ಕಂಪನಿ ನಾಸಾ ದಿಂದ 1ಬಿಲಿಯನ್ ಡಾಲರ್ ಸಹಾಯಧನ ಪಡೆಯುವ ಪ್ರಯತ್ನದಲ್ಲಿದೆ. ನಾರ್ಥ್ ರೊಪ್ ಗ್ರುಮ್ಮನ್ ಎಂಬ ಕಂಪನಿ ಈ ಪರಿಕಲ್ಪನೆಗೆ ಚಾಲನೆ ನೀಡುತ್ತಿದ್ದು, ವಿಮಾನದ ಗರಿಷ್ಠ ವೇಗ ಮಿತಿ ಗಂಟೆಗೆ 220 ಕಿಮೀ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com