ವಿವಾದಾತ್ಮಕ ಭಾರತ ನಕ್ಷೆ ತೆಗೆದುಹಾಕಿದ ಫೇಸ್ ಬುಕ್ ಸಿ.ಇ.ಒ

ಫೇಸ್ ಬುಕ್ ಸಿ.ಇ.ಒ, ಮಾರ್ಕ್ ಜ್ಯೂಕರ್ಬರ್ಗ್
ಫೇಸ್ ಬುಕ್ ಸಿ.ಇ.ಒ, ಮಾರ್ಕ್ ಜ್ಯೂಕರ್ಬರ್ಗ್

ಫೇಸ್ ಬುಕ್ ಸಿ.ಇ.ಒ, ಮಾರ್ಕ್ ಜ್ಯೂಕರ್ಬರ್ಗ್ ಭಾರತದ ನಕ್ಷೆಯನ್ನು ವಿವಾದಾತ್ಮಕ ರೀತಿಯಲ್ಲಿ ಪ್ರಕಟಿಸಿ ಅಂತರ್ಜಾಲ ಬಳಕೆದಾರರಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜಮ್ಮು-ಕಾಶ್ಮೀರ ರಹಿತವಾದ  ಭಾರತದ ನಕ್ಷೆಯನ್ನು ಪ್ರಕಟಿಸಿದ ಪರಿಣಾಮ ಮಾರ್ಕ್ ಜ್ಯೂಕರ್ಬರ್ಗ್ ವಿರುದ್ಧ ಆಕ್ರೋಶ ವ್ಯಕ್ತವಾಗದೆ. ಮಲಾವಿಯಲ್ಲಿ ಇಂಟರ್ ನೆಟ್.org  (Internet.org )ನ್ನು ಉದ್ಘಾಟನೆಯಲ್ಲಿ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಇಂಟರ್ನೆಟ್ ನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವವರೆಗೆ ನಾವು ವಿರಮಿಸುವುದಿಲ್ಲ ಎಂದು ಮಾರ್ಕ್ ಜ್ಯೂಕರ್ಬರ್ಗ್ ಹೇಳಿದ್ದರು. ಈ ವೇಳೆ ಜಮ್ಮು-ಕಾಶ್ಮೀರ ರಹಿತವಾದ ಭಾರತದ ನಕ್ಷೆಯನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು.  

ಭಾರತದ ಮ್ಯಾಪ್ ವಿವಾದಾತ್ಮಕವಾಗಿ ಪ್ರಕಟವಾಗುತ್ತಿದ್ದಂತೆಯೇ ಭಾರತೀಯರು ಮಾರ್ಕ್ ಜ್ಯೂಕರ್ಬರ್ಗ್ ವಾಗ್ದಾಳಿ ನಡೆಸಿದ್ದರು. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆಯೆ ಎಚ್ಚೆತ್ತುಕೊಂಡ ಮಾರ್ಕ್ ಜ್ಯೂಕರ್ಬರ್ಗ್, ವಿವಾದಿತ ನಕ್ಷೆ ಇದ್ದ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ.   

ಇಂಟರ್ ನೆಟ್.org  ಮೂಲಕ ಇಂಟರ್ ನೆಟ್ ಕನೆಕ್ಷನ್ ಇಲ್ಲದೆಯೂ ಆಂಡ್ರ್ಯಾಯ್ಡ್ ಮೊಬೈಲ್ ಬಳಕೆದಾರರು ಶಿಕ್ಷಣ, ಆರೋಗ್ಯ, ಕಮ್ಯುನಿಕೇಶನ್ ಸೇರಿದಂತೆ ಆನ್ ಲೈನ್`ನಲ್ಲಿ ಕೆಲ ನಿರ್ದಿಷ್ಟ ಸೇವೆಗಳನ್ನ ಪಡೆಯಬಹುದಾಗಿದೆ. ಇದು ಫೇಸ್ ಬಕ್ ಸಿ.ಇ.ಒ, ಮಾರ್ಕ್ ಜ್ಯೂಕರ್ಬರ್ಗ್ ಅವರದ್ದೇ ಮತ್ತೊಂದು ಯೋಜನೆಯಾಗಿದ್ದು, ಎಲ್ಲಾ ರಾಷ್ಟ್ರಗಳಿಗೂ ಈ ಆಪ್ ಪರಿಚಯಿಸುವ ಉದ್ದೇಶ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com