4 ಜಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ನಂ.1

ಸ್ಯಾಮ್ ಸಂಗ್  ಸ್ಮಾರ್ಟ್ ಫೋನ್(ಸಂಗ್ರಹ ಚಿತ್ರ)
ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್(ಸಂಗ್ರಹ ಚಿತ್ರ)

4 ಜಿ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಚೀನಾ ಮೊಬೈಲ್ ಗಳು ದಾಂಗುಡಿ ಇಟ್ಟಿದ್ದರೂ, ಎಲ್.ಟಿ.ಇ ಆವೃತ್ತಿಯಲ್ಲಿ ಕೊರಿಯಾದ ಮೊಬೈಲ್ ಉತ್ಪಾದಕ ಸ್ಯಾಮ್ ಸಂಗ್ ಮೋಬೈಲ್ ಗಳು ಭಾರತದಲ್ಲಿ ನಂ.1  ಸ್ಥಾನ ಪಡೆದಿದೆ.

 ಸಿ.ಎಂ.ಆರ್ ನ ತ್ರೈಮಾಸಿಕ ಎಲ್.ಟಿ.ಇ (4G) ಡಿವೈಸ್ ಮಾರ್ಕೆಟ್ ರಿವ್ಯೂ ಮೇ.2015  ರ ಪ್ರಕಾರ,  ಶೇ.27  ರಷ್ಟು ಮಾರ್ಕೆಟ್ ಷೇರನ್ನು ಹೊಂದುವ ಮೂಲಕ ಸ್ಯಾಮ್ ಸಂಗ್  ನಂ.1  ಸ್ಥಾನದಲ್ಲಿದ್ದರೆ, ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಚೀನಾದ ಕ್ಸಿಯಾಮಿ  ಮೊಬೈಲ್ ಸಂಸ್ಥೆ ಶೇ.17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇನ್ನು ಮೊದಲ ಸ್ಥಾನದಲ್ಲಿದ್ದ ಆಪಲ್ ಶೇ.15 ರಷ್ಟು ಮಾರುಕಟ್ಟೆಯನ್ನು ವ್ಯಾಪಿಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ.

ಒಟ್ಟಾರೆ ಎಲ್.ಇ.ಟಿ  ಡಿವೈಸ್ ಗಳು  2.2 ಮಿಲಿಯನ್ ಯುನಿಟ್ ಮಾರಾಟವಾಗಿದೆ. ಈ ಟ್ರೆಂಡ್ ಕನಿಷ್ಠವೆಂದರೂ ಕೆಲವು ತಿಂಗಳ ವರೆಗೆ ಮುಂದುವರೆಯಲಿದೆ ಎಂದು  ಬಗ್ಗೆ, ಸಿಎಂಆರ್ ಟೆಲಿಕಾಮ್ಸ್ ನ  ಖ್ಯಾತ ವಿಶ್ಲೇಷಕ ಅಭಿಪ್ರಾಯಪಟ್ಟಿದ್ದಾರೆ.

4 ಜಿ ಸ್ಮಾರ್ಟ್ ಫೋನ್ ವಿಭಾಗದಲ್ಲಿ  ಸ್ಯಾಮ್ ಸಂಗ್ ಮೊಬೈಲ್ ಗಳು ಅತಿ ಹೆಚ್ಚು ಮಾರಾಟವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ಲೇಷಕ ವಿಕ್ರಾಂತ್ ಸಿಂಗ್, ಮೂರನೇ ಸ್ಥಾನದಲ್ಲಿದ್ದ ಸ್ಯಾಮ್ ಸಂಗ್ ಮೊಬೈಲ್ ಗಳು ಮೊದಲ ಸ್ಥಾನಕ್ಕೆ ಬರಲು ಎ.5 ಎ.6 , ಎಸ್, 6 ಮಾಡಲ್ ಗಳು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ತ್ರೈಮಾಸಿಕದಲ್ಲಿ  19  4 ಜಿ  ಎಲ್.ಇ.ಟಿ ಡಿವೈಸ್ ಗಳು ಮಾರಾಟವಾಗುತ್ತಿವೆ.ಈ ಪೈಕಿ  ಲೆನೊವೋ  A6000 ಮೊಬೈಲ್ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ ಎಂದಿದ್ದಾರೆ.  ಕಳೆದ ತ್ರೈಮಾಸಿಕದಲ್ಲಿ 12 4 ಜಿ  ಎಲ್.ಇ.ಟಿ ಡಿವೈಸ್ ಗಳು ಮಾರಾಟಕ್ಕೆ ಲಭ್ಯವಿದ್ದವು ಎಂದು ವಿಕ್ರಾಂತ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com