
ನವದೆಹಲಿ: ಗೂಗಲ್ ಕ್ರೋಮ್, ಮೊಜಿಲಾ ಫೈರ್ ಫಾಕ್ಸ್, ಒಪೇರಾ ಮಾದರಿಯ ಜನಪ್ರಿಯ ವೆಬ್‍ಬ್ರೌಸರ್ ಒಂದರ ಬಗ್ಗೆ ಅಪನಂಬಿಕೆಯ ಮಾತುಗಳು ಕೇಳಿ ಬಂದಿದೆ.
ಚೀನಾ ಮತ್ತು ಭಾರತದಲ್ಲಿ ಪ್ರಚಲಿತವಾಗಿರುವ ಯುಸಿ ವೆಬ್‍ಬ್ರೌಸರ್ ಬಳಸುವುದು ಸುರಕ್ಷಿತವಲ್ಲವೆಂದೂ, ಇದರಿಂದ ಬಳಕೆದಾರರು ಇರುವ ಜಾಗ, ಮೊಬೈಲ್ ಸಂಖ್ಯೆ, ಮೊಬೈಲ್ ಹ್ಯಾಂಡ್ ಸೆಟ್ ಸಂಖ್ಯೆ ಹಾಗೂ ಇತರೆ ಖಾಸಗಿ ವಿವರಗಳು ಸಲೀಸಾಗಿ ಇತರರಿಗೆ ಲಭ್ಯವಾಗುತ್ತಿದೆಯೆಂದೂ ಸಿಟಿಜನ್ ಲ್ಯಾಬ್ ಎಂಬ ಕೆನಡಾದ ರಿಸರ್ಚ್ ಸಂಸ್ಥೆ ಪತ್ತೆಹಚ್ಚಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಸಿ ವೆಬ್ ಸಂಸ್ಥೆಯ ವಕ್ತಾರ ಬಾಬ್ ಕ್ರಿಸ್ಟೀ, ``ಬ್ರೌಸರ್‍ನಲ್ಲಿದ್ದ ಸಮಸ್ಯೆಗಳನ್ನು ಸರಿಪಡಿಸಿದ್ದು, ಈಗ ಮಾಹಿತಿ ಸೋರಿಕೆಯಾಗುತ್ತಿಲ್ಲ. ಬಳಕೆದಾರರು ಗಾಬರಿಯಾಗುವ ಆಗತ್ಯವಿಲ್ಲ ಎಂದಿದ್ದಾರೆ.
Advertisement