
ಕರಾಚಿ: ಫೇಸ್ ಬುಕ್ ಸಂಸ್ಥೆ ತನ್ನ ಇಂಟರ್ ನೆಟ್.ಆರ್ಗ್ ಅಭಿಯಾನದ ಮೂಲಕ ಪಾಕಿಸ್ತಾನದ ನಾಗರಿಕರಿಗೆ ಉಚಿತ ಇಂಟರ್ ನೆಟ್ ನೇವೆಗಳನ್ನು ಒದಗಿಸುವುದಾಗಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮಾರ್ಕ್ ಜ್ಯೂಕರ್ಬರ್ಗ್ ಘೋಷಿಸಿದ್ದಾರೆ.
ಡಾನ್ ನ್ಯೂಸ್ ಪ್ರಕಾರ, ಫೇಸ್ ಬುಕ್ ನ ಇಂಟರ್ ನೆಟ್.ಆರ್ಗ್ ಸದ್ಯಕ್ಕೆ ಟೆಲ್ನಾರ್ ನೆಟ್ ವರ್ಕ್ ಮೂಲಕ ಲಭ್ಯವಿದೆ.
ಪಾಕಿಸ್ತಾನಕ್ಕೆ ಉಚಿತ ಇಂಟರ್ ನೆಟ್ ಸೇವೆಯನ್ನು ಫೇಸ್ ಬುಕ್ ನಲ್ಲಿ ಜ್ಯೂಕರ್ಬರ್ಗ್ ಬುಧವಾರ ಪ್ರಕಟಿಸಿದ್ದಾರೆ.
ಫೇಸ್ ಬುಕ್ ಸಂಸ್ಥೆಯ ಇಂಟರ್ ನೆಟ್.ಆರ್ಗ್ ಸೇವೆಯ ಮೂಲಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಉಚಿತ ಇಂಟರ್ ನೆಟ್ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.
ಫೇಸ್ ಬುಕ್ ಈ ಸೇವೆಯನ್ನು ಮೊದಲು ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಅನಾವರಣಗೊಳಿಸಿತ್ತು.
Advertisement